ಚಿಕ್ಕಮಗಳೂರು: ಜಿಲ್ಲೆಯ ಜಾಗರ ಸಮೀಪ ಕೊಳೆತ ಸ್ಥಿತಿಯಲ್ಲಿ ಆನೆಯ ಶರೀರದ ಕೆಲವು ಮೂಳೆಗಳು ಪತ್ತೆಯಾಗಿದೆ. ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬ ಬಿದ್ದಿದೆ ಎಂದು ಪರಿಶೀಲಿಸಲು ಹೋದಾಗ ಆನೆಯ ಕೊಳೆತ ದೇಹದ ಬಿಡಿಭಾಗಗಳು ಕಾಣಸಿಕ್ಕಿದೆ.
ಸದರಿ ವಿಷಯ ತಿಳಿದ ಕೂಡಲೇ ಉಪ ಅರಣ್ಯ ಸರಂಕ್ಷಣಾಧಿಕಾರಿ ಕ್ರಾಂತಿ ಸ್ಥಳ ಪರಿಶೀಲನೆ ನಡೆಸಲು ಸ್ಥಳಕ್ಕೆ ಧಾವಿಸಿದರು. ಭದ್ರಾ ವನ್ಯಜೀವಿ ವಿಭಾಗದ ಪಶು ವೈದ್ಯಾಧಿಕಾರಿ ಯಶಸ್ ನೇತೃತ್ವದಲ್ಲಿ ಕಳೆಬರ ಪರಿಶೀಲನೆ ನಡೆಸಲಾಯಿತು.
ಆನೆಯ ಸಾವಿಗೆ ನಿರ್ಧಿಷ್ಟ ಕಾರಣ ತಿಳಿದುಬಂದಿಲ್ಲ. ಪಶುವೈದ್ಯರ ವರದಿಯ ನಂತರ ತಿಳಿಯಬಹುದು. ಆನೆಯ ದೇಹದ ಮೂಳೆ ಹೊರತುಪಡಿಸಿ ಬೇರೆಲ್ಲಾ ಕೊಳೆತು ಹೊಗಿದೆ. ಸ್ಥಳದಲ್ಲಿ ಸಹಾಯಕ ಅರಣ್ಯಾಧಿಕಾರಿ ಮುದ್ದಣ, ವನ್ಯಜೀವಿ ಪರಿಪಾಲಕ ಜಿ. ವಿರೇಶ್, ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಇದ್ದರು.
ಇತ್ತೀಚೆಗೆ ತೋಟದ ಬದಿಯ ವಿದ್ಯುತ್ ತಂತಿ ತಗುಲಿ ಆನೆಯೊಂದು ಸಾವನ್ನಪ್ಪಿದ ಘಟನೆಯನ್ನು ಕನ್ನಡನಾಡಿ ವರದಿ ಮಾಡಿತ್ತು. ಈ ರೀತಿಯ ಹಲವು ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತದೆ. ಬಹುಶಃ ಇದು ಸಹ ಹಾಗೆಯೇ ನಡೆದಿರಬಹುದಾ ಎಂಬುದು ಪಶುವೈದ್ಯ ರಿಂದ ದೃಢವಾಗಬೇಕಿದೆ.

























Discussion about this post