ಚಿಕ್ಕಮಗಳೂರು: ಚುನಾವಣಾ ಮೀಸಲಾತಿ ಕುರಿತು ಜಿಲ್ಲಾ ಪಂಚಾಯತಿ ನೂತನ ಕರಡು ಬಿಡುಗಡೆ ಮಾಡಿದ್ದು, ಆಕ್ಷೇಪಣೆಗಳಿಗೆ ಮುಕ್ತ ಆಹ್ವಾನ ನೀಡಿದೆ.
ಕೊರೊನಾ ಉಪಟಳ ಸ್ವಲ್ಪಮಟ್ಟಿಗೆ ತಗ್ಗಿದ್ದ ಕಾರಣ, ಈ ಹಿಂದೆ ಚುನಾವಣಾ ಪ್ರಕ್ರಿಯೆ ಸಲುವಾಗಿ ಬಿಡುಗಡೆ ಮಾಡಿದ್ದ ಕರಡು ಪ್ರತಿಯಲ್ಲಿ ಕಳಸ ಹೋಬಳಿಯನ್ನು ಹೋಬಳಿಯನ್ನಾಗಿ ಮಾಡಲಾಗಿತ್ತು. ತದನಂತರದಲ್ಲಿ ಕಳಸ ತಾಲ್ಲೂಕು ಎಂಬುದಾಗಿ ಪರಿವರ್ತನೆ ಆದೇಶ ಹೊರಬಿದ್ದ ಕಾರಣ ಹಳೆಯ ಕರಡನ್ನು ರದ್ದುಪಡಿಸಿದೆ. ನೂತನ ಮೀಸಲಾತಿ ಪಟ್ಟಿಯಲ್ಲಿ ಆಕ್ಷೇಪಣೆಗಳಿದ್ದಲ್ಲಿ ಇದೇ ತಿಂಗಳ ೧೯ರ ಒಳಗೆ ಮನವಿ ಸಲ್ಲಿಸಲು ಕೋರಿದೆ.
ಕೊರೊನಾ ಅಬ್ಬರದ ಮೂರನೇ ಅಲೆ ಹೆಚ್ಚು ಸಮಸ್ಯೆಯಾಗಿ ಕಾಡದಿದ್ದಲ್ಲಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಚುನಾವಣೆ ನಡೆಯುವ ಹೆಚ್ಚಿನ ಸಾಧ್ಯತೆ ಇವೆ, ಇಲ್ಲದೆ ಹೋದಲ್ಲಿ ಚುನಾವಣೆ ಡಿಸೆಂಬರ್ ವರೆಗೆ ಮುಂದೂಡಲ್ಪಡುವುದು ಎಂದು ಅಂದಾಜು ಮಾಡಲಾಗಿದೆ.

























Discussion about this post