ಚಿಕ್ಕಮಗಳೂರು: ಸ್ವಚ್ಚ ಭಾರತ ಮಿಷನ್ ಅಡಿಯಲ್ಲಿ ಜಿಲ್ಲೆಯ 150 ಗ್ರಾಮಪಂಚಾಯಿತಿಗಳಿಗೆ ಪಂಚಾಯಿತಿಗಳಿಗೆ ಸ್ವಚ್ಚವಾಹಿನಿ ವಾಹನಗಳನ್ನು ನೀಡಲಾಗಿದೆ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು.
ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ವತಿಯಿಂದ ತಾಲೂಕಿನ ಇಂದಾವರ ಮತ್ತು ಅಲ್ಲಂಪುರ ಗ್ರಾಮಪಂಚಾಯಿತಿಗಳಲ್ಲಿ ಸ್ವಮೋತ್ಸವ-ನಿತ್ಯೋತ್ಸವ ಮಾಸಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಇವುಗಳು ಪ್ರತಿ ಮನೆ ಮನೆ ಬಾಗಿಲಿಗೆ ತೆರಳಿ ಪ್ಲಾಸ್ಟಿಕ್, ಗಾಜು ಮತ್ತಿತರ ತ್ಯಾಜ್ಯಗಳನ್ನು ಸಂಗ್ರಹಣೆ ಮಾಡಲಿದೆ ಎಂದರು.
ಮುಂದಿನ ೧೫ ದಿನದೊಳಗೆ ಎಲ್ಲಾ ಗ್ರಾಮಪಂಚಾಯಿತಿಗಳಿಗೂ ತ್ಯಾಜ್ಯ ಸಂಗ್ರಹಣೆ ವಾಹನಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಗ್ರಾಮಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಒಗಳು ಗ್ರಾಮಗಳಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಸ್ವಚ್ಚವಾಹಿನಿ ವಾಹನವು ಗ್ರಾ.ಪಂ ವ್ಯಾಫ್ತಿಯಲ್ಲಿ ಯಾವ ಗ್ರಾಮಕ್ಕೆ ಯಾವ ದಿನ ತೆರಳಬೇಕು, ಸಿಬ್ಬಂದಿಗಳು ಯಾರಿರಬೇಕು? ಎಂಬುದರ ಬಗ್ಗೆ ವೇಳಾಪಟ್ಟಿ ನಿಗಧಿಪಡಿಸಿ ನಿರಂತರವಾಗಿ ತ್ಯಾಜ್ಯ ಸಂಗ್ರಹಣೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ವರ್ಷದಲ್ಲಿ ಮೂರು ಬಾರಿ ತಮ್ಮ ಗ್ರಾಮಗಳಲ್ಲಿನ ಶಾಲೆ, ಸಮುದಾಯ ಭವನ, ಮತ್ತಿತರ ಸಾರ್ವಜನಿಕ ಸ್ಥಳದಲ್ಲಿ ಗಿಡಗಂಟಿಗಳ ತೆರವು, ಚರಂಡಿಗಳ ಸ್ವಚ್ಚತೆಯನ್ನು ಕಡ್ಡಾಯವಾಗಿ ಹಮ್ಮಿಕೊಳ್ಳಬೇಕು ಈ ಬಗ್ಗೆ ೨೦೦ ಗ್ರಾಮಪಂಚಾಯಿತಿಗಳಿಗೆ ಆದೇಶ ಹೊರಡಿಸಲಾಗಿದೆ. ಜಿಲ್ಲೆಯು ಹಲವು ಪ್ರವಾಸಿ ತಾಣಗಳನ್ನು ಹೊಂದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಕಾರಣ ತಾಣಗಳು ಸ್ವಚ್ಚವಾಗಿದ್ದಲ್ಲಿ ಆಹ್ಲಾದಕರ ವಾತಾವರಣ ನಿರ್ಮಿಸಲಿದೆ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ೨೨೬ ಗ್ರಾಮಪಂಚಾಯಿತಿಗಳಲ್ಲಿ ನಿರಂತರವಾಗಿ ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಗುವುದು, ಗ್ರಾಮಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮೀಣ ಜನರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಲಾಗುವುದು ಅ.೨ ರಿಂದ ಜಿಲ್ಲೆಯ ಎಲ್ಲಾ ೨೨೬ ಗ್ರಾಮಪಂಚಾಯಿತಿಗಳಲ್ಲಿ ಮಹಾತ್ಮಗಾಂಧಿಜೀಯವರ ಜನ್ಮದಿನದ ಅಂಗವಾಗಿ ನಿರಂತರ ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗ್ರಾಮಪಂಚಾಯಿತಿ ಅಧ್ಯಕ್ಷ ದಾನೇಶ್, ಉಪಾಧ್ಯಕ್ಷೆ ಅರ್ಪಿತಾಪ್ರಸನ್ನ, ಸದಸ್ಯರಾದ ಮಧುಸೂಧನ್, ಎ.ಟಿ.ರಮೇಶ್, ವಸಂತ್ಕುಮಾರ್, ಪಿಡಿಒ ಸುರಯ್ಯಾಭಾನು, ಕಾರ್ಯದರ್ಶಿ ಎಂ.ಸಿ. ಹೇಮಶೇಖರಪ್ಪ, ಇಂದಾವರ ಗ್ರಾ.ಪಂ ಅಧ್ಯಕ್ಷೆ ದ್ರಾಕ್ಷಯಣಮ್ಮ, ಉಪಾಧ್ಯಕ್ಷ ಸುಭಾಷ್, ಸದಸ್ಯರಾದ ಚಂದ್ರಶೇಖರ್, ಕೆಂಚಯ್ಯ, ಜ್ಯೋತಿ ಯೋಗೇಶ್, ಆಶಾ, ನೇತ್ರಾವತಿ, ಪಿಡಿಒ ನರಸಿಂಹಮೂರ್ತಿ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

























Discussion about this post