ಮುಂಬೈ: ಜೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ಜೀಲ್) ಮತ್ತು ಸೋನಿ ಪಿಚ್ಚರ್ಸ್ ನೆಟ್ವರ್ಕ್ ವಿಲೀನಕ್ಕೆ ಜೀ ಎಂಟರ್ಟೈನ್ಮೆಂಟ್ಆಡಳಿತ ಮಂಡಲಿ ನಿದರ್ದೇಶಕರು ಒಪ್ಪಿಗೆ ಸೂಚಿಸಿದ್ದಾರೆ. ಪುನೀತ್ ಗೋಯೆಂಕಾ ವ್ಯವಸ್ಥಾಪಕ ನಿದೇಶಕ ಮತ್ತು ಸಿಇಒ ಆಗಿ ಮುಂದುವರಿಯಲಿದ್ದಾರೆ.
ಈ ಕುರಿತು ಎರಡೂ ಸಂಸ್ಥೆಗಳು ಭಾರತೀಯ ಷೇರುಪೇಟೆ ನಿಯಂತ್ರಣ ಸಂಸ್ಥೆಗೆ (ಸೆಬಿ) ಬುಧವಾರ ತಿಳಿಸಿವೆ.
ಎರಡೂ ಕಂಪನಿಗಳು ವಿಲೀನಗೊಂಡ ಬಳಿಕ ಶೇ. 50.86ರಷ್ಟು ಷೇರುಗಳನ್ನು ಸೋನಿ ಹೊಂದಿರಲಿದೆ. ಜೀಲ್ಗೆ ಶೇ. 3.99ರಷ್ಟು ಪಾಲುದಾರಿಕೆ ಇರಲಿದೆ. ಜೀ ಎಂಟರ್ಟೈನ್ಮೆಂಟ್ನ ಇನ್ನಿತರ ಷೇರುದಾರರು ಶೇ. 45.15ರಷ್ಟು ಷೇರುಗಳನ್ನು ಹೊಂದಿರಲಿದ್ದಾರೆ.
ಸೋನಿ ಮ್ಯಾಕ್ಸ್, ಜೀ ಟಿವಿ, ಸ್ಟ್ರೀಮಿಂಗ್ ಪ್ಲಾಟ್ಫಾರಂಗಳಾದ ಜೀ5 ಮತ್ತು ಸೋನಿಎಲ್ಐವಿ ಹಾಗೂ ಎರಡೂ ಸಂಸ್ಥೆಗಳ ಫಿಲಂ ಆಸ್ತಿಗಳು ವಿಲೀನ ಆಗಲಿವೆ.
ಆಡಳಿತ ಮಂಡಳಿಯ ನಿರ್ದೇಶಕರರಲ್ಲಿ ಬಹುಪಾಲು ಸ್ಥಾನಕ್ಕೆ ಸೋನಿ ಸಮೂಹ ನೇಮಕ ಮಾಡಲಿದೆ ಎಂದು ತಿಳಿದುಬಂದಿದೆ.
ಎರಡು ಎಂಟರ್ಟೈನ್ಮೆಂಟ್ ಮೀಡಿಯಾಗಳು ಒಂದಾಗುತ್ತಿದ್ದು, ಹೊಸ ಪರ್ವ ಶುರುವಾಗಲಿದೆ. ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ವಿಲೀನಗೊಂಡ ಕಂಪನಿಗಳು ಸಮಗ್ರ ವಾಗಿ ಗ್ರಾಹಕರ ಸೇವೆಯಲ್ಲಿ ತೊಡಗಲಿವೆ ಎಂದು ಜೀ ಎಂಟರ್ಪ್ರೈಸಸ್ನ ಸಿಇಒ ಮತ್ತು ಎಂಡಿ ಪುನಿತ್ ಗೋಯೆಂಕಾ ಹೇಳಿದ್ದಾರೆ.
ಈ ಎರಡೂ ಕಂಪನಿಗಳ ವಿಲೀನದ ಬಗ್ಗೆ ಸೆಪ್ಟೆಂಬರ್ 22ರಂದು ಘೋಷಣೆ ಆಗಿತ್ತು. 90 ದಿನದೊಳಗೆ ಈ ಪ್ರಕ್ರಿಯೆ ಮುಗಿಸುವುದಾಗಿ ತಿಳಿಸಿದ್ದವು.
Zee-Sony Merger Approved
ಇದನ್ನು ಓದಿ: TV Channel Rate: ಶೀಘ್ರವೇ ಟಿವಿ ಚಾನಲ್ ದರ ಶೇ. 50 ರಷ್ಟು ಏರಿಕೆ ಸಾಧ್ಯತೆ.
ಇದನ್ನೂ ಓದಿ: ಇಡೀ ದಿನ ಮೊಬೈಲ್, ಕಂಪ್ಯೂಟರ್ ಬಳಸುವವರು ಅನುಸರಿಸಲೇಬೇಕಾದ ಟಿಪ್ಸ್ ಇಲ್ಲಿದೆ
Discussion about this post