ಕ್ವಿಟೋ : ಈಕ್ವೆಡಾರ್ನ ಗಯಾಕ್ವಿಲ್ನ ಜೈಲಿನಲ್ಲಿ ಗ್ರೇನೆಡ್ ಸ್ಪೋಟಗೊಂಡ ದುರ್ಘಟನೆ ನಡೆದಿದ್ದು, ಅಪಾರ ಆಸ್ತಿಪಾಸ್ತಿ ನಷ್ಟವಾಗಿದ್ದು, ಪ್ರಾಣ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ.
ಸದರಿ ಜೈಲಿನಲ್ಲಿದ್ದ ೨೪ ಖೈದಿಗಳು ಮೃತಪಟ್ಟಿದ್ದು, ೪೮ ಮಂದಿ ಗಾಯಗೊಂಡಿರುವ ಕುರಿತು ರಾಷ್ಟ್ರೀಯ ಕಾರಾಗೃಹಗಳ ಬ್ಯುರೋ ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರೇನೆಡ್ ದಾಳಿಯಲ್ಲಿ ಮೃತಪಟ್ಟವರಲ್ಲಿ ಬಹುತೇಕರು ಮಾದಕ ವಸ್ತು ಸಾಗಾಟಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕಾರಾಗೃಹದಲ್ಲಿದ್ದ ಆರೋಪಿಗಳ ಕೈಯಲ್ಲಿದ್ದ ಬಂದೂಕು, ರಿವಾಲ್ವಾರ್ ಹಾಗೂ ೫೦೦ಕ್ಕೂ ಅಧಿಕ ಮದ್ದುಗುಂಡುಗಳನ್ನು ಜೈಲಿನ ಅಧಿಕಾರಿಗಳು ವಶಕ್ಕೆ ಪಡೆದಿದ್ದರು ಸಹ ಈ ಸ್ಫೋಟ ಜೈಲಿನಲ್ಲೇ ನಡೆದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಜೈಲಿನಲ್ಲಿ ಗ್ರೇನೆಡ್ ಸ್ಪೋಟ ನಡೆಸಲಾಗಿದೆ. ಬಹುಶಃ ಜೈಲಿನಿಂದ ಪರಾರಿಯಾಗುವ ಸಲುವಾಗಿ ಖೈದಿಗಳು ಈ ಸ್ಪೋಟ ನಡೆಸಿದ್ದಾರೆಯೇ ಅನ್ನೋ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದಿರುವ ಈಕ್ವೇಡಾರ್ ಅಧ್ಯಕ್ಷ ಗಿಲ್ಲೆರ್ಮೊ ಲಾಸೋ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಿದ್ದಾರೆ.
Discussion about this post