ಚಿಕ್ಕಮಗಳೂರು: ಮೂಡಿಗೆರೆಯ ಸಮೀಪದಲ್ಲಿ ಬೃಹತ್ ಮರವೊಂದು ದಾರಿಗೆ ಬಿದ್ದಿದ್ದು ಪ್ರಯಾಣಿಕರಿಗೆ ಬಹಳ ತೊಂದರೆಯಾಗಿತ್ತು.
ಮೂಡಿಗೆರೆಯ ಗೆಂಡೇಹಳ್ಳಿ ಮಾರ್ಗವಾಗಿ ಸಾಗುವ ಬೊಮ್ಮನಹಳ್ಳಿ ಊರಿನ ಮಧ್ಯೆ ಬೃಹತ್ ಮರವೊಂದು ರಸ್ತೆಯಲ್ಲಿ ಬಿದ್ದಿತ್ತು. ಮೆಸ್ಕಾಂ ಕೋರಿಕೆ ಮೇರೆಗೆ ಸಂಘದ ಸದಸ್ಯರು ಕೈಜೋಡಿಸಿದ್ದಾರೆ.
ಮೆಸ್ಕಾಂ , ಅರಣ್ಯ ಇಲಾಖೆ ಸೇರಿ ಸ್ವಯಂ ಸೇವಕರು ಸುಮಾರು ಮೂರು ಗಂಟೆಗಳ ಕಾಲ ಮರವನ್ನು ತೆರೆವುಗೊಳಿಸಲು ಶ್ರಮ ವಹಿಸಿದ್ದಾರೆ.
ಬೆಳಗಿನ ಜಾವ ೫ ಗಂಟೆಯ ಸುಮಾರಿಗೆ ನಡೆದ ಈ ಸಮಸ್ಯೆಗೆ ಮೆಸ್ಕಾಂ ಸಿಬ್ಬಂದಿ ರವಿ, ಸ್ವಯಂ ಸೇವಕ ತಂಡದ ಪ್ರವೀಣ್ ಪೂಜಾರಿ, ಅರುಣ್ ಪಿಂಟೂ, ರವಿ ಪೂಜಾರಿ, ಮಂಜುನಾಥ್ ಪೆಟ್ರೋಲ್ ಬಂಕ್, ಅಶ್ವಥ್ ಬಸ್ಕಲ್ ಮೊದಲಾದವರ ಜೊತೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಸಹ ಕೆಲಸ ಮಾಡಿದ್ದಾರೆ.

























Discussion about this post