ದುಬೈ: ನಗರದ ಜೆಬೆಲ್ ಅಲಿಯ ಗುರುನಾನಕ್ ದರ್ಬಾರ್ ಪಕ್ಕದಲ್ಲಿ ನಿರ್ಮಾಣವಾಗುತ್ತಿದೆ ಹಿಂದೂ ದೇವಾಲಯ.
ಈ ಹೊಸ ಹಿಂದೂ ದೇವಾಲಯದ ಕಾಮಗಾರಿಯು ಶೇ. ೫೦ಕ್ಕಿಂತ ಹೆಚ್ಚು ಪೂರ್ಣಗೊಂಡಿದ್ದು, ಸದ್ಯದಲ್ಲೇ ಪೂರ್ಣಗೊಳ್ಳಲಿದೆ.
ಸದರಿ ದೇಗುಲದ ನಿರ್ಮಾಣಕ್ಕೆ ಅಡಿಪಾಯವನ್ನು ಆ. ೨೯, ೨೦೨೦ರಂದು ಹಾಕಲಾಗಿತ್ತು. ದೇವಾಲಯವು ಹಿಂದೂ ಹಬ್ಬ ದಸರಾ ೨೦೨೨ರಲ್ಲಿ ಉದ್ಘಾಟನೆಗೊಳ್ಲಲಿದೆ ಎಂದು ಭಾರತೀಯ ಉದ್ಯಮಿ ಮತ್ತು ಸಿಂಧಿ ಗುರು ದರ್ಬಾರ್ ದೇವಸ್ಥಾನದ ಟ್ರಸ್ಟಿಗಳಲ್ಲಿ ಒಬ್ಬರಾದ ರಾಜು ಶ್ರಾಫ್ ಹೇಳಿದ್ದಾರೆ.
ದೇವಾಲಯದ ವಾಸ್ತು ಶಿಲ್ಪವು ಅರಬ್ ಮಾದರಿಯಲ್ಲಿದೆ. ಇದು ೫೦೦೦ ಚರದ ಅಡಿ, ಪ್ರಾರ್ಥನಾ ಪ್ರದೇಶಕ್ಕೆ ಇದ್ದು, ಮುಂಭಾಗ-ಒಳಭಾಗದಲ್ಲಿನ ಅಂಕಣಗಳು ಭಾರತದ ಗುಜರಾತ್ ನಲ್ಲಿರುವ ಸೋಮನಾಥ ದೇವಾಲಯದ ಸಾಂಪ್ರದಾಯಿಕ ಅಂಕಣಗಳಿಂದ ಪ್ರೇರಿತವಾಗಿದೆ.
ಮುಖ್ಯ ಶಿಖರ ಗೋಪುರ ಗುಮ್ಮಟವು ಉತ್ತರ ಭಾರತದಲ್ಲಿ ಪ್ರಧಾನವಾಗಿ ಕಂಡುಬರುವ ಹಿಂದೂ ದೇವಾಲಯದ ವಾಸ್ತುಶಿಲ್ಪದ ನಾಗರ ಶೈಲಿಯಿಂದ ಸ್ಫೂರ್ತಿ ಪಡೆದಿದೆ.
ಅಂದಾಜು ೭೫ ದಶಲಕ್ಷ ದಿಹಾರ್ ನಲ್ಲಿಈ ದೇವಾಲಯ ನಿರ್ಮಾಣವಾಗುತ್ತಿದೆ.
Discussion about this post