ಚಿಕ್ಕಮಗಳೂರು (ಕನ್ನಡನಾಡಿ ಸುದ್ದಿಜಾಲ): ನಗರವನ್ನು ಸಂಪೂರ್ಣ ಸ್ವಚ್ಚವನ್ನಾಗಿಸಲು ನಗರಸಭೆಯೊಂದಿಗೆ ಸಾರ್ವಜನಿಕರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಸಹಕಾರ ಅಗತ್ಯ ಎಂದು ನಗರಸಭೆ ಪೌರಾಯುಕ್ತ ಬಸವರಾಜ್ ಹೇಳಿದರು.
ಅವರು ಹಿರೇಮಗಳೂರಿನ ಅಂಬೇಡ್ಕರ್ ವೃತ್ತದಲ್ಲಿ ಅಂತರಾಷ್ಟ್ರೀಯ ಜೀವ ವೈವಿದ್ಯ ದಿನಾಚರಣೆ ಅಭಿಯಾನ ಅಂಗವಾಗಿ ನಗರಸಭೆ ಹಾಗೂ ನೇಚರ್ ಕನರ್ವೆಷನ್ ಟ್ರಸ್ಟ್ ವತಿಯಿಂದ ಗಿಡನೆಡುವ ಹಾಗೂ ಪರಿಸರ ಸ್ವಚ್ಚತಾ ಆಂದೋಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಅಮೃತ ಮಹೋತ್ಸವ ತುಂಬುತ್ತಿರುವ ಹಿನ್ನಲೆ ನಗರದಲ್ಲಿ ಗಿಡನೆಡುವ ಹಾಗೂ ಸ್ವಚ್ಚತಾ ಆಂದೋಲನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಹಿರೇಮಗಳೂರಿನ ಅಂಬೇಡ್ಕರ್ ವೃತ್ತದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಗರಸಭೆ ಸಿಬ್ಬಂದಿಗಳು ತಂಡವನ್ನು ರಚಿಸಿಕೊಳ್ಳುವ ಮೂಲಕ ಸ್ವಚ್ಚತಾ ಆಂದೋಲನಾ ನಡೆಸಲಿದ್ದಾರೆ ಎಂದು ತಿಳಿಸಿದರು.
ನಗರದ ಪ್ರತಿ ವಾರ್ಡ್ಗಳಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ಸ್ವಚ್ಚತಾ ಸಮಿತಿಯನ್ನು ರಚಿಸಿ ಆ ವ್ಯಾಪ್ತಿಯ ಉದ್ಯಾನವನ, ಪರಿಸರ ಸ್ವಚ್ಚತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ. ಇದಕ್ಕಾಗಿ ೧೩ ಅರ್ಜಿಗಳು ಬಂದಿದ್ದು ನಿವೃತ್ತ ಮಾಜಿ ಸೈನಿಕರು, ಸ್ವಯಂ ಸೇವಕ ಸಂಘ-ಸಂಸ್ಥೆಗಳ ಮುಖಂಡರನ್ನು ಸಮಿತಿಯ ಸದಸ್ಯರನ್ನಾಗಿ ಮಾಡಿ ಸ್ವಚ್ಚತಾ ನಿರ್ವಹಣೆ ಕಾರ್ಯಕ್ಕೆ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದರು.
ಷಡಕ್ಷರಿ ಮಾತನಾಡಿ ಪರಿಸರ ಸ್ವಚ್ಚತೆಯು ಕೇವಲ ನಗರಸಭೆ ಕಾರ್ಯವೆಂದು ಭಾವಿಸದೇ ಎಲ್ಲಾ ಸಾರ್ವಜನಿಕರು ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು, ಜೊತೆಗೆ ಅದರೊಟ್ಟಿಗೆ ಕೈಜೋಡಿಸಬೇಕು, ನಗರವ್ಯಾಪ್ತಿಯಲ್ಲಿ ಸುಮಾರು ೧೪೪ ಉದ್ಯಾನವನಗಳಿದ್ದು ಪರಿಸರವನ್ನು ಸಂರಕ್ಷಣೆ ಮೂಲಕ ನಿರ್ವಹಣೆ ಮಾಡಬೇಕು, ಪರಿಸರವನ್ನು ಹಾಳುಮಾಡುವವರು, ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಅಧಿಕ ದಂಡ ವಿಧಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸ್ವಚ್ಚತಾ ಆಂದೋಲನದಲ್ಲಿ ನಗರಸಭೆಯ ಸಿಬ್ಬಂದಿಗಳು, ಸ್ವಚ್ಚತಾ ಟ್ರಸ್ಟ್ನ ಪದಾಧಿಕಾರಿಗಳು, ವಿಷನ್ ಗ್ರೂಪ್ ಸದಸ್ಯರು, ಸ್ಕೌಟ್ಸ್ ಮತ್ತು ಗೈಡ್ಸ್ ಸೇವಕರು, ರೆಡ್ ಕ್ರಾಸ್ ಸಂಸ್ಥೆ ಸಿಬ್ಬಂದಿಗಳು, ಬ್ರಹ್ಮಕುಮಾರೀಸ್ ಸಂಸ್ಥೆಯು ಸದಸ್ಯರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಈ ವೇಳೆ ಶುಭ ವಿಜಯ್ಕುಮಾರ್ ಮಾತನಾಡಿ ಸಲಹೆ ನೀಡಿದರು.

























Discussion about this post