ಚಿಕ್ಕಮಗಳೂರು: ಆಯುಧಪೂಜೆ ಹಿನ್ನೆಲೆ ನಗರಸಭೆ ಆವರಣದಲ್ಲಿ ನಗರಸಭೆ ವಾಹನಗಳಿಗೆ ಹೂವುಗಳಿಂದ ಶೃಂಗರಿಸಿ ಆಯುಧಪೂಜೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ನಗರಸಭೆ ವಾಹನಗಳನ್ನು ಶುಚಿಗೊಳಿಸಿ ವಾಹನಗಳಿಗೆ ವಿವಿಧ ಹೂವುಗಳಿಂದ ಅಲಂಕರಿಸಿದ ನಗರಸಭೆ ಸಿಬ್ಬಂದಿಗಳು ವಿಶೇಷಪೂಜೆ ಸಲ್ಲಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಆನಂದ್ ಮಾತನಾಡಿ, ನಿತ್ಯ ನಗರವನ್ನು ಶುಚಿ ಗೊಳಿಸಿ ಸ್ವಚ್ಛವಾಗಿಡುವ ಪೌರ ಕಾರ್ಮಿಕರು ಹಬ್ಬದ ಹಿನ್ನೆಲೆಯಲ್ಲಿ ನಗರಸಭೆ ವಾಹನ ಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಿರುವುದು ಸಂತೋಷದಾಯಕವಾಗಿದೆ ಎಂದು ಹಬ್ಬದ ಶುಭಾಶಯ ಕೋರಿದರು.
ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ಆಯುಧಪೂಜೆ ಹಿನ್ನೆಲೆಯಲ್ಲಿ ನಗರಸಭೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ನಿತ್ಯ ಬಳಸುವ ೫೦ಕ್ಕೂ ಹೆಚ್ಚು ಕಸತುಂಬುವ ಆಟೋಗಳು, ಟ್ರಾಕ್ಟರ್, ಟಿಪ್ಪರ್ಗಳನ್ನು ಶುಚಿ ಗೊಳಿಸಿ ಆಯುಧಪೂಜೆ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಹಬ್ಬದ ಉಡುಗೊರೆಯಾಗಿ ಪ್ರತೀ ಕಾರ್ಮಿಕರಿಗೆ ಹೊಸಬಟ್ಟೆಗಳನ್ನು ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣ ಸ್ವಾಮಿ ಸೇರಿದಂತೆ ಆಶ್ರಯ ಸಮಿತಿ ಸದಸ್ಯರು ಹಾಗೂ ನಗರಸಭೆ ಸಿಬ್ಬಂದಿಗಳು ಪೌರ ಕಾರ್ಮಿಕರು ಇದ್ದರು.

























Discussion about this post