ಕನ್ನಡನಾಡಿ ನ್ಯೂಸ್ ಬ್ಯೂರೊ: ಮಲಯಾಳಂ ಕಿರುತೆರೆಯ ಜನಪ್ರಿಯ ನಟ ರಮೇಶ್ ವಲಿಯಶಾಲ (೫೪)ಅವರು ನಿಧನರಾಗಿದ್ದಾರೆ. ಹಲವಾರು ಸೀರಿಯಲ್ಗಳಲ್ಲಿ ನಟಿಸಿ ಫೇಮಸ್ ಆಗಿದ್ದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶೂಟಿಂಗ್ ಮುಗಿಸಿ ತಿರುವನಂತಪುರಂನಲ್ಲಿರುವ ತಮ್ಮ ಮನೆಗೆ ಬಂದಿದ್ದ ಅವರು ನೇಣು ಹಾಕಿಕೊಂಡಿದ್ದಾರೆ.
ರಮೇಶ್ ಅವರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅವರು ಇಂಥ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನಿರಬಹುದು ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ಶುರುವಾಗಿದೆ.
ಕಳೆದ ಕೆಲವು ವರ್ಷಗಳಿಂದ ರಮೇಶ್ ಅವರು ತಮ್ಮ ಎರಡನೇ ಪತ್ನಿ ಮತ್ತು ಮಗನ ಜೊತೆ ವಲಿಯಶಾಲದ ನಿವಾಸದಲ್ಲಿ ಇರುತ್ತಿದ್ದರು. ಬೆಳಗ್ಗೆ 6.30ರ ಸುಮಾರಿಗೆ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ಅವರ ಪತ್ನಿ ಮೊದಲು ನೋಡಿದರು. ನಂತರ ಅವರ ಶವನನ್ನು ಮೆಡಿಕಲ್ ಕಾಲೇಜ್ ಶವಾಗಾರಕ್ಕೆ ತೆಗೆದುಕೊಂಡು ಹೋಗಲಾಗಿದೆ.
ರಮೇಶ್ ಅವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಕೊರೊನಾ ವೈರಸ್ನಿಂದ ಜಾರಿಯಾದ ಲಾಕ್ಡೌನ್ನಿಂದಾಗಿ ಅವರಿಗೆ ಹಣಕಾಸಿನ ಸಮಸ್ಯೆ ಎದುರಾಗಿತ್ತು. ಆ ಕಾರಣದಿಂದಲೇ ಹೀಗೆ ಮಾಡಿರಬಹುದು ಎಂದು ಪೊಲೀಸ್ ಮೂಲಗಳು ಅಭಿಪ್ರಾಯಪಟ್ಟಿವೆ. IPC ಸೆಕ್ಷನ್ 174ರ ಪ್ರಕಾರ (ಅಸಹಜ ಸಾವು) ಕೇಸ್ ದಾಖಲಿಸಲಾಗಿದೆ.
ಪೌರ್ಣಮಿ ತಿಂಗಳ್’ ಧಾರಾವಾಹಿಯಲ್ಲಿ ರಮೇಶ್ ಅವರ ಕೊನೆಯದಾಗಿ ನಟಿಸಿದ್ದರು. ರಮೇಶ್ ನಿಧನಕ್ಕೆ ಸೆಲೆಬ್ರಿಟಿಗಳು, ಸ್ನೇಹಿತರು ಮತ್ತು ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದ ಅವರು ಕಳೆದ 22 ವರ್ಷಗಳಿಂದಲೂ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದರು. ಹಾಗಾಗಿ ಅವರಿಗೆ ಆರ್ಥಿಕ ಸಂಕಷ್ಟ ಇರಲಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

























Discussion about this post