ಚಿಕ್ಕಮಗಳೂರು: ಅವೈಜ್ಞಾನಿಕವಾಗಿ ಏತನೀರಾವರಿ ಮೂಲಕ ಕೇವಲ ನೀರಾವರಿಯ ಸ್ಮಾರಕವಾಗಿ ಪ್ರತಿಷ್ಠಾಪಿಸುವ ಮೂಲಕ ಬಯಲು ಭಾಗದ ರೈತರ ಬದುಕಿಗೆ ಕೊಳ್ಳಿಇಟ್ಟಂತಾಗಿದೆ ಎಂದು ಕರಗಡ ಕುಡಿಯುವ ಹೀರಿನ ಹೋರಾಟ ಸಮಿತಿ ಮುಖಂಡರು ಹೇಳಿದರು.
ಜಂಟಿಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಮಿತಿ ಸಂಚಾಲಕರು ನೀರಾವರಿ ಯೋಜನೆಗಳ ಕುರಿತು ನಿಖರತೆ, ಸ್ಪಷ್ಟತೆಯನ್ನು ಇಟ್ಟುಕೊಳ್ಳದ ಈ ಕ್ಷೇತ್ರದ ಶಾಸಕ ಸಿ.ಟಿ.ರವಿ, ನೀರಾವರಿ ಯೋಜನೆ ಕುರಿತಂತೆ ದಿನಕ್ಕೊಂದು ಹೇಳಿಕೆಗಳನ್ಹು ಕೊಡುತ್ತಾ, ನೀರಾವತಿ ಯೋಜನೆ ಅನುಷ್ಠಾನಕ್ಕೆ ಹೋರಾಡುತ್ತಿರುವ ಚಳವಳಿಗಾರರನ್ನು ಹೀಯ್ಯಾಳಿಸುತ್ತಾ ನೀರಾವತಿಯೋಜನೆ ಅನುಷ್ಠಾನಕ್ಕೆ ತರುವಲ್ಲಿ ಕಾಲಕರಣ ಮಾಡುತ್ತಿದ್ದಾರೆಂದು ಟೀಕಿಸಿದರು.
ಕಳೆದ ೨೦ ವರ್ಷದಿಂದ ಕರಗಡ ಯೋಜನೆ ಕಾಮಗಾರಿ ನಡೆಯುತ್ತಲೇ ಬಂದಿದ್ದರೂ.ಕರಗಡದ ಯೋಜಜನೆ ಸಾಧಕ,ಬಾಧಕಗಳ ಕುರಿತು ನೀರಾವರಿ ಇಲಾಖೆಯೊಂದಿಗಾಗಲಿ, ನೀರಾವತಿ ತಜ್ಞರೊಂದಿಗಾಗಲಿ, ರೈತರು, ಹೋರಾಟಗಾರರೊಂದಿಗೆ ಸೌಜನ್ಯಕ್ಕೆ ಸಮಾಲೋಚನೆ ನಡೆಸದೆ ತಮಗೆ ಎಲ್ಲವೂ ತಿಳಿದಿದೆ ಎಂಬಂತೆ ವರ್ತಿಸುವ ಮೂಲಕ ರೈತರಿಗೆ ಉಪಯುಕ್ತವಾಗಬೇಕಿದ್ದ ನೀರಾವತಿ ಯೋಜನೆ ಹಾಳುಗೆಡವಲಾಗಿದೆ ಎಂದು ಆರೋಪಿಸಿದರು.
ರೈತರ ಬದುಕಿನೊಂದಿಗೆ ಚೆಲ್ಲಾಟವಾಡಲಾಗುತ್ತಿದೆ. ಕರಗಡ ಯೋಜನೆ ಗುರುತ್ವಾಕರ್ಷಣೆ ಮೂಲಕ ನೀರುಹರಿಸುವ ಮೂಲ ಯೋಜನೆಯಾಗಿದೆ. ಆದರೆ ಅದನ್ನು ಅನುಷ್ಠಾನಗೊಳಿಸಲು ಬೇಕಾದ ಅನುದಾಣ ಮತ್ತು ಕಾಲುವೆ ನಿರ್ಮಾಣಕ್ಕೆ ಪೂರಕವಾದ ಕಾಮಗಾರಿಗಳನ್ನು ವೈಜ್ಞಾನಕವಾಗಿ ನಡೆಸುವ ಕುರಿತು ಕ್ರಮಕೈಗೊಳ್ಳುವ ಬದಲು ಕಾಲಹರಣ ಮಾಡುತ್ತಲೇ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ದೂರಿದರು.
ಮೂಲಯೋಜನೆಯನ್ನು ಪರಿವರ್ತಿಸಿ ಏತ ನೀರಾವರಿಯ ಮೂಲಕ ನೀರು ಹರಿಸುವ ಏಕಪಕ್ಷೀಯ ನಿರ್ಧಾರಕೈಗೊಂಡು ೯ ಕೋಟಿಯನ್ನು ಸರ್ಕಾರದಿಂದ ಬಿಡುಗಡೆಗೊಳಿಸಿಕೊಂಡು ಕೇವಲ ೩ಕೋಟಿ ರೂ. ಖರ್ಚುಮಾಡಿ ಪಂಪ್ ಅಳವಡಿಕೆ ಮೂಲಕ ನೀರುಹರಿಸಲು ಮುಂದಾಗಿರುವುದು ಕೃಷಿಹೊಂಡ ನಿರ್ಮಾಣದಂತಹ ಕಾಮಗಾರಿಗೆ ಮಾತ್ರ ಸೀಮಿತವಾದಂತಾಗಿದೆ ಎಂದು ಹೇಳಿದರು.
ಯೋಜನೆ ಕುರಿತು ಹೋರಾಟಗಾರರು ಆಕ್ಷೇಪವ್ಯಕ್ತಪಡಿಸಿದರೆ, ಅವರುಗಳು ರೈತರೇ ಅಲ್ಲ, ನಿರುದ್ಯೋಗಿಗಳು ಎಂದು ಹಿಯ್ಯಾಳಿಸಿ ದರ್ಪದ ವರ್ತನೆ ತೋರುತ್ತಿರುವುದು ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯ ಲಕ್ಷಣವಲ್ಲ ಏತನೀರಾವರಿಯಾಗಲಿ, ಅಥವಾ ಮೂಲ ಯೋಜನೆಯಾಗಲಿ ಒಟ್ಟಾರೆ ಕೆರೆಗಳಿಗೆ ನೀರು ಹರಿದರೆ ಸಾಕೆಂದು ಕ್ಷೇತ್ರದ ಜನರು ಸಮಾಧಾನಪಟ್ಟುಕೊಳ್ಳುತ್ತಾರೆಂದು ತಿಳಿಸಿರುವುದು ಪಂಪ್ ಮೂಲಕ ನೀರುಹರಿಸಿದರೆ ನೀರಾವರಿ ಯೋಜನೆ ಸ್ಮಾರಕವಾಗಿ ಉಳಿಯುತ್ತದೆ ಎಂದು ತಿಳಿಸಿದರು.
ರೈತರಿಗೆ ಉಪಯುಕ್ತವಾಗಲು ಯಾವ ರೀತಿಯಲ್ಲಿ ಕಾಮಗಾರಿಗಳನ್ನು ಮುಂದುವರೆಸಬೇಕೆಂಬುದರ ಬಗ್ಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.
ಹೋರಾಟ ಸಮಿತಿ ರಾಜಕಾರಣ ಮಾಡುವುದಿಲ್ಲ, ಇದೇ ರೀತಿ ಹೋರಾಟಗಾರರನ್ನು ಟೀಕಿಸುತ್ತಿದ್ದರೆ, ಮುಂದಿನ ಚುನಾವಣೆಯನ್ನು ಎದುರಿಸಲು ಹೋರಾಟ ಸಮಿತಿ ಮುಂದಾಗಲಿದೆ ಎಂದು ಹೇಳಿದರು.ಸಮಿತಿ ಸಂಚಾಲಕರಾದ ಗುರುಶಾಂತಪ್ಪ, ರವೀಶ್ಕ್ಯಾತನಬೀಡು, ಬಿ.ಅಮ್ಜದ್, ಎಚ್.ಎಂ.ರೇಣುಕಾರಾಧ್ಯ ಇದ್ದರು.
ಇದನ್ನೂ ಓದಿ: ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪ್ರತಿ ತಿಂಗಳು 5 ಸಾವಿರ
ಇದನ್ನೂ ಓದಿ: ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಬಿ.ಹೊಸಳಿ ಗ್ರ್ರಾಮಸ್ಥರ ಮನವಿ

























Discussion about this post