ಚಿಕ್ಕಮಗಳೂರು: ತರೀಕೆರೆ ಪುರಸಭೆ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ೧೧ ಜನ ಕಾರ್ಯಕರ್ತರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ತಿಳಿಸಿದ್ದಾರೆ.
ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಿರುವುದಾಗಿ ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು, ವಾರ್ಡ್ ನಂ.೪ ರಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿರುವ ಟಿ.ಕೆ.ಪ್ರಕಾಶ್, ೯ನೆಯ ವಾರ್ಡಿನಲ್ಲಿ ಪಕ್ಷದ ವಿರುದ್ಧ ಸ್ಪರ್ಧಿಸಿರುವ ಮಮತಾ ಶೇಖರ್, ೧೨ನೆಯ ವಾರ್ಡಿನಲ್ಲಿ ಸ್ಪರ್ಧಿಸಿರುವ ತಿಮ್ಮಕ್ಕ ಗಾಳಪ್ಪ ಮತ್ತು ಜ್ಯೋತಿ ಮುನೀರ್, ೧೩ನೆಯ ವಾರ್ಡಿನಲ್ಲಿ ಸ್ಪರ್ಧಿಸಿರುವ ಪರಮೇಶ್ ವಕೀಲರು, ೧೪ನೆಯ ವಾರ್ಡಿನಲ್ಲಿ ಸ್ಪರ್ಧಿಸಿರುವ ಹೇಮಾವತಿ, ೧೭ನೆಯ ವಾರ್ಡಿನಲ್ಲಿ ಸ್ಪರ್ಧಿಸಿರುವ ನೂರ್ ಬಾಷ, ೧೮ನೆಯ ವಾರ್ಡಿನಲ್ಲಿ ಸ್ಪರ್ಧಿಸಿರುವ ದವನ್ ರಾಜ್, ೧೯ನೆಯ ವಾರ್ಡಿನಲ್ಲಿ ಸ್ಪರ್ಧಿಸಿ ರುವ ಧರ್ಮರಾಜ್, ಈರಣ್ಣ ಹಾಗೂ ೨೩ನೆಯ ವಾರ್ಡಿನಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿರುವ ಟಿ.ಆರ್.ಪುಟ್ಟಮ್ಮ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ.
ಇವರಲ್ಲಿ ಅನೇಕರು ಪಕ್ಷದ ಪದಾಧಿಕಾರಿಗಳಾಗಿದ್ದಾರೆ. ಮತ್ತೆ ಕೆಲವರು ಪುರಸಭೆಯ ಅಧ್ಯಕ್ಷರಾಗಿಯು ಕೆಲಸ ಮಾಡಿದ್ದಾರೆ. ಇವರುಗಳು ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಆ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ದೂರು ಆಧರಿಸಿ ಪಕ್ಷ ಈ ಶಿಸ್ತು ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

























Discussion about this post