ಬೀಜಿಂಗ್: ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಮತ್ತು ಅತಿ ವಿಶಾಲವಾದ ಯುದ್ಧ ನೌಕೆಯನ್ನು ಪಾಕಿಸ್ತಾನಕ್ಕೆ ಚೀನಾ ಮಂಗಳವಾರ ಶಾಂಘೈನಲ್ಲಿ ಹಸ್ತಾಂತರ ಮಾಡಿದೆ.
ಚೀನಾದ ಸರ್ಕಾರಿ ಸ್ವಾಮ್ಯದ ನೌಕಾ ನಿರ್ಮಾಣ ನಗಮ ನಿಯಮಿತ (ಸಿಎಸ್ಎಸ್ಸಿ) ಈ ಹಡಗನ್ನು ಶಾಂಘೈ ಬಂದರು ಕಟ್ಟೆಯಲ್ಲಿ ನಿರ್ಮಿಸಿದೆ.
054ಎ/ಪಿ ಮಾದರಿ ಈ ಜಹಜಿಗೆ ಪಿಎನ್ಎಸ್ ತುಘ್ರಿಲ್ ಎಂದು ನಾಮಕಾರಣ ಮಾಡಲಾಗಿದೆ. ಇದು ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಪಾಕ್ಗೆ ಭದ್ರತೆ ನೀಡಲಿದ್ದು, ಈ ವಲಯದಲ್ಲಿ ನಿಗಾವನ್ನೂ ಇಡಲಿದೆ. ಈ ಮೂಲಕ ಭಾರತವನ್ನು ಕಟ್ಟಿಹಾಕುವ ಪ್ರಯತ್ನವನ್ನು ಉಭಯ ದೇಶಗಳು ಮಾಡುತ್ತಿವೆ.
ಸರ್ವಋತು ಸಂಚಾರ, ಅತ್ಯಾಧುನಿಕ ತಂತ್ರಜ್ಞಾನ, ಕಡಲ ಚಟುವಟಿಕೆ ಮೇಲೆ ನಿಗಾ ಇರಿಸುವಿಕೆ, ಯುದ್ಧ ಕಾಲದಲ್ಲಿ ನೆರವು ನೀಡುವಂತಹ ಎಲೆಕ್ಟ್ರಾನಿಕ್ ವ್ಯವಸ್ಥೆಗಳನ್ನು ಈ ನೌಕೆ ಹೊಂದಿದೆ.
‘ನಮ್ಮ ನೌಕಾದಳದ ಬಲ ಹೆಚ್ಚಿಸುವ ಮತ್ತು ಕಡಲ ಸವಾಲುಗಳಿಗೆ ತಕ್ಕ ಉತ್ತರ ನೀಡುವ ಪಿಎನ್ಎಸ್ ತುಘ್ರಿಲ್ ಹಡಗು, ಹಿಂದು ಮಹಾಸಾಗರದಲ್ಲಿ ಸಮತೋಲಿತ ಅಧಿಕಾರವನ್ನು ಕಾಯ್ದುಕೊಳ್ಳಲು ಅನುವು ಮಾಡಿಕೊಡುತ್ತದೆ. ಇದರಿಂದ ಪ್ರಾದೇಶಿಕ ವಲಯದಲ್ಲಿ ಶಾಂತಿ ಮತ್ತು ಸುಸ್ಥಿರತೆ ವೃದ್ಧಿಸುತ್ತದೆ ಎಂದು ಪಾಕ್ ನೌಕಾದಳದ ಪರವಾಗಿ ಪಿಎನ್ಎಸ್ ತುಘ್ರಿಲ್ ಅನ್ನು ಸ್ವೀಕರಿಸಿದ ಚೀನಾದಲ್ಲಿರುವ ಮೋಯಿನ್ ಖಾನ್ ಹೇಳದ್ದಾರೆ.
ಭಾರತದ ಮೇಲೆ ಒತ್ತಡದ ತಂತ್ರ:
ಹಿಂದೂ ಮಹಾಸಾಗರದ ಪ್ರಾದೇಶಿಕದಲ್ಲಿ ಭಾರತದ ಹಿಡಿತವನ್ನು ತಗ್ಗಿಸಿ ತನ್ನ ಆಧಿಪತ್ಯ ಸ್ಥಾಪಿಸಬೇಕೆಂದು ಚೀನಾದ ದೀರ್ಘಾಕಾಲದ ಹವಣಿಸುತ್ತಿದೆ. ಇದರ ಭಾಗವಾಗಿ ಈಗ ಪಾಕ್ಗೆ ತುಘ್ರಿಲ್ ನೌಕೆಯನ್ನು ನೀಡಿ ಒತ್ತಡ ಹಾಕುವ ತಂತ್ರ ಮಾಡಿದೆ. ಹಿಂದೂ ಮಹಾಸಾಗರ ಪ್ರಾದೇಶಿಕ ವಲಯವನ್ನು ತನ್ನ ಸುಪದರ್ದಿಗೆ ತೆಗೆದುಕೊಳ್ಳಲು ಏಕಾಂಗಿಯಾಗಿ ಆಗದು ಎಂಬ ಸತ್ಯ ಚೀನಾಕ್ಕೆ ಗೊತ್ತಿದೆ, ಹೀಗಾಗಿ ಹಿಂದೂ ಮಹಾಸಾಗರದ ಬಹು ವಿಸ್ತಾರದ ಮಾರ್ಗಕ್ಕೆ ಒಳಪಡುವ ಬಂಗಾಳಕೊಲ್ಲಿಯ ಬದಿಯ ಬಾಂಗ್ಲಾ ದೇಶ, ಮೂರೂ ಸಮುದ್ರಗಳ ಸಂಗಮ ಸ್ಥಳದಲ್ಲಿರುವ ಶ್ರೀಲಂಕಾ, ಹಿಂದೂ ಮಹಾಸಾಗರದ ನಡುಗಡ್ಡೆಯಂತಿರುವ ಮಾರಿಷಸ್ ಮತ್ತು ಅರಬ್ಬಿ ಸಮುದ್ರದ ರೇವುಗಳನ್ನು ಹೊಂದಿರುವ ಪಾಕಿಸ್ತಾನಗಳನ್ನು ತನ್ನ ತಂತ್ರದ ಭಾಗವನ್ನಾಗಿ ಮಾಡಿಕೊಂಡು ಈ ದೇಶಗಳಿಗೆ ಅಗತ್ಯ ನೆರವನ್ನು ಚೀನಾ ನೀಡುತ್ತಿದೆ. ಶ್ರೀಲಂಕಾದಲ್ಲಿ ಗುತ್ತಿಗೆ ಆಧಾರದ ಮೇಲೆ ಬಂದರು ನಿರ್ಮಾಣ, ನಿರ್ವಹಣೆ ಮಾಡುತ್ತಿರುವ ಚೀನಾ ತನ್ನ ನೌಕೆಗಳಿಗೆ ನೆಲೆಯನ್ನು ಕಲ್ಪಿಸಿಕೊಳ್ಳುತ್ತಿದೆ. ಬಾಂಗ್ಲಾದೇಶಕ್ಕೆ ವಿಮಾನ ನಿಲ್ದಾಣ, ಬಂದರು ಕಟ್ಟೆಕಟ್ಟಿಕೊಡುತ್ತಿದೆ. ಮಾರಿಷಸ್ನಲ್ಲಿ ನೌಕಾ ನೆಲೆಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಪಾಕ್ನಲ್ಲಿ ಸಿಪಿಇಸಿ ಯೋಜನೆಯಡಿ ರೈಲು, ಮಾರ್ಗ, ಬಂದರು ಸೇರಿದಂತೆ ಇನ್ನಿತರ ಮೂಲ ಸೌಕರ್ಯದ ಜತೆಗೆ ಮಿಲಿಟರಿ ಸಾಮಗ್ರಿ, ಶಸ್ತ್ರಾಸ್ತ್ರವನ್ನು ಕೊಡುತ್ತಿದೆ. ಇದರ ಭಾಗವಾಗಿಯೇ ಜೆಎಫ್- 17 ಥಂಡರ್ ಯುದ್ಧ ವಿಮಾನವನ್ನು ಈಗಾಗಲೇ ಕೊಟ್ಟಿದೆ.
China Delivers Warship To Pakistan
ಇದನ್ನು ಓದಿ: ತೈವಾನ್ ಗಡಿಯಲ್ಲಿ ಭೋರ್ಗರೆದ ಯುದ್ಧ ವಿಮಾನಗಳು: ದ್ವೀಪ ರಾಷ್ಟ್ರದ ಮೇಲೆ ಹೆಚ್ಚುತ್ತಿದೆ ಚೀನಾ ದಬ್ಬಾಳಿಕೆ
ಇದನ್ನು ಓದಿ: Kashmir: ಕಾಶ್ಮೀರದಲ್ಲಿ ನಾಗರಿಕರ ಮೇಲಿನ ದಾಳಿ: ಪಾಕಿಸ್ತಾನದ ಐಎಸ್ಐ ಹಸ್ತಕ್ಷೇಪ
Discussion about this post