ಚನ್ನೈ: ತಮಿಳುನಾಡಿನಲ್ಲಿ ದ್ರಾವಿಡ ಚಳವಳಿ ರೂಪಿಸಿದ ಮುಖಂಡ, ಸಾಮಾಜಿಕ ಚಳಿವಳಿ ಹರಿಕಾರ, ಇ.ವಿ.ರಾಮಸ್ವಾಮಿ ಪೆರಿಯಾರ್ ಜನ್ಮದಿನ, ಸೆ.17 ಅನ್ನು ಪ್ರತಿ ವರ್ಷ “ಸಾಮಾಜಿಕ ನ್ಯಾಯದಿನ’ ಎಂದು ಆಚರಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಈ ಮಾಹಿತಿ ನೀಡಿದ್ದಾರೆ. ಚಿಂತಕ ಪೆರಿಯಾರ್ ಸಾಮಾಜಿಕ ನ್ಯಾಯ, ಆತ್ಮಗೌರವ, ಸಮಾನತೆ ಬಗ್ಗೆ ಹೊಂದಿದ್ದ ನಿಲುವುಗಳು ರಾಜ್ಯ ಸದ್ಯ ಹೊಂದಿರುವ ಅಭಿವೃದ್ಧಿಗೆ ಕಾರಣವಾಗಿದೆ ಎಂದವರು ಪೆರಿಯಾರ್ ರಾಮಸ್ವಾಮಿ ಅವರನ್ನು ಬಣ್ಣಿಸಿದ್ದಾರೆ.
ಪ್ರತಿಜ್ಞೆ ಸ್ವೀಕಾರ
ತಮಿಳುನಾಡಿನಲ್ಲಿ ಪ್ರಸಕ್ತ ವರ್ಷದಿಂದ ಅನ್ವಯವಾಗುವಂತೆ ಅವರ ಜನ್ಮದಿನವನ್ನು ಪ್ರತಿ ವರ್ಷ “ಸಾಮಾಜಿಕ ನ್ಯಾಯದಿನ’ ಎಂದು ಆಚರಿಸಲಾಗುವುದು. ಆ ದಿನ ಸಚಿವಾಲಯ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಹೋದರತ್ವ, ಸಮಾನತೆ, ಆತ್ಮಗೌರವದ ಪ್ರತಿಜ್ಞೆಯನ್ನು ಸ್ವೀಕರಿಸಲಾಗುತ್ತದೆ ಎಂದರು.

























Discussion about this post