ಬಣಕಲ್: ಬಾಲ್ಯದಲ್ಲೇ ಪ್ರತಿಭೆ ಬೆಳಗಿಸುವುದು ಸುಲಭದ ಮಾತಲ್ಲ. ವಿವಿಧ ಸ್ಪರ್ಧೆಯಲ್ಲಿ ಮೂರು ವರ್ಷದ ಬಾಲೆ ಎಸ್.ಆರ್ವಿ ಕೇಳಿದ ಪ್ರಶ್ನೆಗಳಿಗೆ ಹರಳು ಉರಿದಂತೆ ಉತ್ತರಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾಳೆ. ಪ್ರಶಸ್ತಿಯ ಜೊತೆಗೆ ಹೆಸರು ’ಇಂಡಿಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲಾಗಿದೆ.
ಆನ್‌ಲೈನ್ ಮೂಲಕ ೧೨ ಬಣ್ಣಗಳು, ೯ ಆಕಾರಗಳು, ೧೩ ಹಣ್ಣುಗಳು, ೧೯ ವಿವಿಧ ವಾಹನಗಳು, ೧೫ ತರಕಾರಿಗಳು, ೩೭ ಪ್ರಾಣಿಗಳು, ಕನ್ನಡ ಮತ್ತು ಹಿಂದಿ ಅಂಕೆಗಳು, ಇಂಗ್ಲೀಷ್ ಸಂಖ್ಯೆಗಳು, ಕನ್ನಡ ಮತ್ತು ಇಂಗ್ಲೀಷ್ ವರ್ಣಮಾಲೆಗಳು, ಏಳು ಇಂಗ್ಲೀಷ್ ಪದ್ಯಗಳು, ದ್ವಿಭಾಷೆಯಲ್ಲಿ ದಿನಗಳು ಮತ್ತು ತಿಂಳುಗಳ ಹೆಸರು ನಿರರ್ಗಳವಾಗಿ ಹೇಳುವ ಮೂಲಕ ಹಾಗೂ ೭ ಪ್ರಾಣಿಗಳ ಅನುಕರಣೆ ಮಾಡುವ ಮೂಲಕ ಪ್ರತಿಭೆ ಬೆಳಗಿಸಿ ವಿಜೇತಳಾಗಿ ಬಾಲ್ಯದಲ್ಲೇ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿರುವುದು ಪೋಷಕರಿಗೆ ಸಂತಸ ತಂದಿದೆ ಎಂದು ಆರ್ವಿಯ ತಾಯಿ ಸ್ಮಿತಾ ಶಾಶ್ವತ್ ತಿಳಿಸಿದ್ದಾರೆ.
ಮಗಳು ವರ್ಷ ತುಂಬಿದಾಗಲೇ ಮಗಳು ಚೂಟಿಯಾಗಿದ್ದು ಏನೇ ಹೇಳಿದ್ದನ್ನು ನೆನಪಿಡುವ ಗುಣ ಹೊಂದಿದ್ದರಿಂದ ಅವಳಿಗೆ ಅಭ್ಯಾಸ ನೀಡಿದ್ದೇ. ಇದು ಅವಳಿಗೆ ಪ್ರಶಸ್ತಿ ದೊರೆಯಲು ಕಾರಣವಾಯಿತು ಎಂದು ಅವರು ಹೇಳಿದ್ದಾರೆ. ಪ್ರತಿಭಾವಂತ ಬಾಲೆ ಎಸ್. ಆರ್ವಿ ಬಣಕಲ್‌ನ ಕೂಡಹಳ್ಳಿಯ ಕೆ.ಎಸ್.ಶಾಶ್ವತ್ ಹಾಗೂ ಸ್ಮಿತಾ ದಂಪತಿಯ ಪುತ್ರಿಯಾಗಿದ್ದು, ಇವಳ ಹೆಸರು ಈಗ ’ಇಂಡಿಯಾ ಬುಕ್ ಆಫ್ ರೆಕಾರ್ಡ್’ ನಲ್ಲಿ ಸೇರಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

























Discussion about this post