ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಹಿನ್ನಲೆ ಅಕ್ಟೋಬರ್ ಏಳರವರೆಗೆ 20 ದಿನಗಳ ಕಾಲ ಸೇವೆ ಮತ್ತು ಸಮರ್ಪಣ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಾದ್ಯಂತ ತಾಲೂಕು ಮಟ್ಟದ ಬೂತ್ ಗಳಲ್ಲಿ 20 ಕ್ಕೂ ಹೆಚ್ಚು ಸೇವಾ ಕಾರ್ಯಕ್ರಮಗಳು ನಡೆಯಲಿವೆ. ಮುಖ್ಯವಾಗಿ ಬೃಹತ್ ಲಸಿಕಾ ಅಭಿಯಾನ, ದಿವ್ಯಾಂಗರಿಗೆ ಉಪಯುಕ್ತ ಸಲಕರಣೆಗಳ ವಿತರಣೆ, ಆರೋಗ್ಯ ತಪಾಸಣಾ ಶಿಬಿರ, ಕೊಳಗೇರಿಗಳು, ಅನಾಥಾಶ್ರಮ ವೃದ್ಧಾಶ್ರಮಗಳಲ್ಲಿ ಹಣ್ಣು ಹಂಪಲು ವಿತರಣೆ, ಮಹಿಳಾ ಮೋರ್ಚಾದಿಂದ ಪಡಿತರ ಚೀಲಗಳ ವಿತರಣೆ, ಯುವ ಮೋರ್ಚಾದಿಂದ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ದಿ ತಾಲೂಕುಮಟ್ಟದ ಬೂತ್ಗಳಲ್ಲಿ ಸ್ವಚ್ಛ ಭಾರತ ಅಭಿಯಾನ ಕೈಗೊಳ್ಳಲಾಗುವುದು, ಸಣ್ಣ ಕುಶಲಕರ್ಮಿಗಳಿಗೆ, ಖಾದಿಗೆ ಪ್ರೋತ್ಸಾಹ, ಮತ್ತಿತರ ಚಟುವಟಿಕೆಗಳನ್ನು ಉತ್ತೇಜಿಸುವ ಮೂಲಕ ವಿಶೇಷ ಗೌರವ ನೀಡಲಾಗುವುದು, ಸ್ವತಂತ್ರದ ಅಮೃತ ಮಹೋತ್ಸವ ಆಚರಣೆ ಜೊತೆಗೆ ಗಾಂಧಿ ತತ್ವ ಟು ಸಿದ್ಧಾಂತದ ಕುರಿತಾಗಿ ಸಾಮಾಜಿಕ ಜಾಗೃತಿ ಅಭಿಯಾನ ಕೈಗೊಳ್ಳಲಾಗುವುದು,
ನಿರ್ಧಾರ ಭಾರತ ಕುರಿತಾಗಿ ಸಮ್ಮೇಳನ ವಿಚಾರಗೋಷ್ಠಿ ಆಯೋಜಿಸಲಾಗುವುದು, ತಿಯನ್ನು ಬಳಸುವಂತೆ ವ್ಯಾಪಕ ಪ್ರಚಾರ ನಡೆಸಲಾಗುವುದು, ನಗರದ ವಿವಿಧ ವೃತ್ತಗಳಲ್ಲಿ ರುವ ಮೂರ್ತಿಗಳ ಸುತ್ತ ಸ್ವಚ್ಛತೆಯನ್ನು ಮಾಡಿದರು ಗಳಿಸುವ ವಿಶಿಷ್ಟ ಅಭಿಯಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸೆ. 25 ರಂದು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ 105 ನೇ ಜಯಂತಿ ಅಂಗವಾಗಿ ಯಂದು ಬೂತ್ ನಲ್ಲಿ ಇಂದಯನ್ ಅವರ ಭಾವಚಿತ್ರ ಮೂರ್ತಿಗೆ ಮಾಲಾರ್ಪಣೆ ಮಾಡಲಾಗುವುದು. ಪ್ರಿಯ ನಾಗರಿಕರು ಪ್ರತಿಭಾವಂತ ವಿದ್ಯಾರ್ಥಿಗಳು ಕ್ರೀಡಾ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಲಾಗುವುದು, ಜಿಲ್ಲೆಯಲ್ಲಿ ಸೆಪ್ಟಂಬರ್ 17ರಂದು ಜಿಲ್ಲೆಯಾದ್ಯಂತ 70 ವೀರ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಜಿಲ್ಲಾಸ್ಪತ್ರೆ ಜಿಲ್ಲಾಡಳಿತ ಸಹಕಾರ ನೀಡಲಿದೆ ಇದು ತಿಳಿಸಿದರು. ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಸುಧೀರ್ ಡಿ. ಇದ್ದರು

























Discussion about this post