ಚಿಕ್ಕಮಗಳೂರು: ಜಿಲ್ಲಾಧಿಕಾರಿ ಮಹತ್ವದ ಆದೇಶ ನೀಡುವ ಮೂಲಕ ಕರೋನ ಮೂರನೇ ಅಲೆ ಹರಡದಂತೆ ತಡೆಯಲು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ.
ಪ್ರವಾಸಿಗರ ಹಾಗೂ ವಾಹನಗಳಸಂಖ್ಯೆಗೂ ಕಡಿವಾಣ ಬೀಳಲಿದೆ. ನಗರದ ಸುತ್ತಮುತ್ತಲಿನ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಝರಿ ಪ್ರದೇಶಗಳಿಗೆ ಬೆಳಿಗ್ಗೆ ೬-೯ರವರೆಗೆ ಹಾಗೂ ಮದ್ಯಾಹ್ನ ೨ ರಿಂದ ೪ರವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಒಂದು ಬಾರಿಗೆ ೧೫೦ ವಾಹನಗಳು ಸಂಚಾರಿಸಬೇಕಾಗಿದ್ದು, ದಿನದಲ್ಲಿ ಕೇವಲ ೩೦೦ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಒದಗಿಸಲಾಗಿದೆ. ಅಯ್ಯನ ಕೆರೆ,ರತ್ನ ಗಿರಿ ಬೋರೆಗಳಿಗೆ ಯಾವುದೇ ಸಮಯದಲ್ಲಾದರೂ ಕೇವಲ ೨೦೦ ಜನ ಮತ್ತು ಹಿರೇಕೊಳಲೆಗೆ ಕೇವಲ ನೂರು ಜನರಿಗೆ ಮಾತ್ರ ಅವಕಾಶ
ಒಟ್ಟು ಪ್ರವಾಸಿಗರ ಸಂಖ್ಯೆ ದಿನಕ್ಕೆ ೧೨೦೦ ಮಾತ್ರ ಇದ್ದು, ದ್ವಿಚಕ್ರವಾಹನವನ್ನು ಒಂದು ವಾಹನ ಎಂದು ಪರಿಗಣಿಸಲಾಗುತ್ತದೆ. ಜಿಲ್ಲೆಯ ಅನಧಿಕೃತ ರೆಸಾರ್ಟ್, ಹೋಂ ಸ್ಟೇ ಗೆ ಹೋಗುವವರು ದಾಖಲೆ ತೋರಿಸಲೇಬೇಕಾಗುವುದು. ಸ್ಥಳೀಯ ಖಾಸಗಿ ವಾಹನಗಳಿಗೆ ಈ ನಿರ್ಬಂಧ ಹೇರಿಕೆ ಇಲ್ಲ ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಮಾಹಿತಿ ನೀಡಿದ್ದಾರೆ.
ಬೆಟ್ಟಗಳ ಮೇಲೆ ಅತಿಹೆಚ್ಚು ಪ್ರವಾಸಿಗರಿಂದ ಜನದಟ್ಟನೆ ಉಂಟಾಗುವುದು, ಕೋವಿಡ್ ಹರಡುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಟಫ್ ನಿಯಮಗಳನ್ನು ಜಿಲ್ಲಾಡಳಿತ ಜಾರಿಗೊಳಿಸಿದೆ.

























Discussion about this post