ಹೈದರಾಬಾದ್: (CHILDREN VACCINE FOR CARONA) ಹೈದರಾಬಾದ್ ಮೂಲದ ಲಸಿಕಾ ಉತ್ಪಾದನ ಕಂಪನಿ ಬಯೋಲಾಜಿಕಲ್-ಇ (BIOLOGICAL-E) ಕೊರೋನಾ ಲಸಿಕೆಯ 2 ಮತ್ತು3ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಡಿಸಿಜಿಐ (DCGI) ಅನುಮತಿ ನೀಡಿದೆ.
ಈ ಬಯೋಲಾಜಿಲ್ ಇ ಲಸಿಕೆಯು 5-18 ವರ್ಷದ ಮಕ್ಕಳಿಗೆ ಸಿದ್ಧಪಡಿಸಲಾಗಿದೆ. ಕೆಲವು ನಿಯಮಗಳನುಸಾರ ದೇಶದ 10 ಕಡೆಗಳಲ್ಲಿ ಎರಡು ಮತ್ತು ಮೂರನೇ ಹಂತದ ಪ್ರಯೋಗಗಳು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ಲಸಿಕೆ ಕುರಿತು ತಜ್ಞರ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಡಿಸಿಜಿಐ (DCGI) ಅನುಮತಿ ನೀಡಿದೆ.
ಈಗಾಗಲೇ 2-18 ವರ್ಷದ ಮಕ್ಕಳಿಗೆ ಭಾರತ್ ಬಯೋಟೆಕ್ (BHARAT BIOTECH) ತಯಾರಿಸಿರುವ ಕೋವಾಕ್ಸಿನ್ ಲಸಿಕೆಯ ಎರಡು ಹಾಗೂ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ (CLINICAL TRIAL) ನಡೆಯುತ್ತಿದ್ದು, 12 ರಿಂದ 18 ವರ್ಷದೊಳಗಿನವರಿಗಾಗಿ ಜಿಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ಜಿಕೋವ್- ಡಿ ಲಸಿಕೆ ತುರ್ತು ಬಳಕೆಗೆ ಅನುಮತಿ ಪಡೆದಿದೆ.
ಜೂನ್ ನಲ್ಲಿ ಬಯೋಲಾಜಿಲ್ ಇ ಸಂಸ್ಥೆ ಅಭಿವೃದ್ಧಿಪಡಿಸಿದ ಲಸಿಕೆಯ 30 ಕೋಟಿ ಡೋಸ್ ಗಳನ್ನು ವರ್ಷಾಂತ್ಯದೊಳಗೆ ಕಾಯ್ದಿರಿಸುವಂತೆ ಆರೋಗ್ಯ ಇಲಾಖೆ ಒಪ್ಪಂದ ಮಾಡಿಕೊಂಡಿತ್ತು.

























Discussion about this post