ಚಿಕ್ಕಮಗಳೂರು: ಭಾರತ ದೇಶದಲ್ಲಿ ೭೫ನೇ ವರ್ಷದ ಸಂಭ್ರಮಾಚರಣೆಯ ಸಂಧರ್ಭದಲ್ಲಿ ಯುವಜನತೆಯಲ್ಲಿ ದೇಶಭಕ್ತಿ ಮನೋಭಾವನೆ ಜಾಗೃತಗೊಳಿಸಲು ’ಸ್ವರಾಜ್ಯಕ್ಕೆ ೭೫ ವರ್ಷ’ ಶೀರ್ಷಿಕೆಯಡಿಯಲ್ಲಿ ಬಿಜೆಪಿ ಯುವಮೋರ್ಚ ಸೈಕಲ್ ಜಾಥಾ ಹಮ್ಮಿಕೊಂಡಿದೆ.
ಯುವಕರಲ್ಲಿ ದೇಶದ ಏಕತೆ ಮತ್ತು ಸಮಗ್ರತೆ ಮೂಡಿಸುವ ಉದ್ದೇಶ ಹೊಂದಿದ್ದು ಜಾಥಾದಲ್ಲಿ ಭಾಗವಹಿಸಲು ನೊಂದಣಿಗೆ ೮೬೬೦೯೨೦೩೪೩ ಸಂಪರ್ಕಿಸಲು ಕೋರಿದ್ದಾರೆ.
ದಿನಾಂಕ ೧೫ರಂದು ನಗರದಲ್ಲಿ ಶಾಸಕರಾದ ಸಿ.ಟಿ. ರವಿಯವರಿಂದ ಸೈಕಲ್ ಜಾಥಾದ ಉದ್ಘಾಟನೆ ಕಾರ್ಯ ನಡೆಯಲಿದ್ದು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಖರಾಯಪಟ್ಟಣದಲ್ಲಿ ಮುಕ್ತಾಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

























Discussion about this post