ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಭಜರಂಗದಳದ ಸಂಸ್ಥಾಪನ ದಿನದ ಅಂಗವಾಗಿ ನಗರದ ಹನುಮಂತಪ್ಪ ವೃತ್ತದಲ್ಲಿ ಭಜರಂಗದಳದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಭಜರಂಗದಳದ ನಗರ ಸಂಯೋಜಕ ಶ್ಯಾಮ್ ಮಾತನಾಡಿ ದೇಶದಲ್ಲಿ ಭಜರಂಗದಳವು ಅತ್ಯಂತ ಬಲಿಷ್ಟ ಹಿಂದೂ ಸಂಘಟನೆಯಾಗಿದೆ. ೧೯೮೪ ರ ಅ.೦೮ ರಂದು ಇಂದು ಸ್ಥಾಪಿತವಾಯಿತು. ಪೂರ್ವ ಕಾಲದಲ್ಲಿ ಹಿಂದುಗಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ಶ್ರೀರಾಮ ಸ್ಥಾಪಿತಗೊಳಿಸಿದ್ದರು. ಇಂದು ದೇಶಾದ್ಯಂತ ವಿಸ್ತರಿಸಿದೆ ಎಂದರು.
ಹಿಂದುತ್ವ ಪ್ರತಿಪಾದನೆ ಜತೆಗೆ ಹಿಂದುಗಳ ರಕ್ಷಣೆಗಾಗಿ ಭಜರಂಗದಳ ನಿರಂತರವಾಗಿ ದೇಶಸೇವೆಯಲ್ಲಿ ತೊಡಗಲಿದೆ, ಮುಖ್ಯವಾಗಿ ಗೋಹತ್ಯೆ, ಲವ್ ಜಿಹಾದ್ನ, ಮತಾಂತರಗಳು ಸಂಪೂರ್ಣವಾಗಿ ನಿಷೇಧವಾಗಬೇಕು ಇಲ್ಲವಾದಲ್ಲಿ ಭಜರಂಗದಳದ ಕಾರ್ಯಕರ್ತರು ಇದರ ವಿರುದ್ದವಾಗಿ ಸಂಘರ್ಷ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಿಶ್ವಹಿಂದು ಪರಿಷತ್ ಭಜರಂಗದಳದ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗನಾಥ್, ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ಗುರುಕಿರಣ್, ಮಂಜು ಸೇರಿದಂತೆ ಮತ್ತಿತರರು ಇದ್ದರು.

























Discussion about this post