ನವದೆಹಲಿ: ಕೋವಿಡ್-19 ತಡೆಯಲು ಭಾರತದಲ್ಲೇ ತಯಾರಿಸಲಾಗುತ್ತಿರುವ ಮೆರ್ಕ್ ಕಂಪನಿಯ ಮೊಲ್ನುಪಿರವಿರ್ ಮಾತ್ರೆಗೆ ಒಂದೆರಡು ದಿನದಲ್ಲಿ ಭಾರತೀಯ ಔಷಧ ನಿಯಂತ್ರಕರು ಅನುಮೋದನೆ ನೀಡುವ ನಿರೀಕ್ಷೆ ಇದೆ. ಇದೇ ರೀತಿಯ ಪ್ಯಾಕ್ಸ್ಲೋವಿಡ್ ಮಾತ್ರೆಯನ್ನು ಅಮೆರಿಕದ ಫೈಜರ್ ಕಂಪನಿ ಕೂಡ ಉತ್ಪಾದಿಸಿದೆ.
ಅಮೆರಿಕ ಮೂಲದ ಕಂಪನಿ ಮೆರ್ಕ್ ಅಭಿವೃದ್ಧಿ ಪಡಿಸಿರುವ ಮೊಲ್ನುಪಿರವಿರ್ ಮಾತ್ರೆಯನ್ನು ಭಾರತದಲ್ಲಿ ಉತ್ಪಾದಿಸಲಾಗಿದ್ದು, ಆಸ್ಪತ್ರೆಗೆ ದಾಖಲಾಗುವ ಅಪಾಯದಲ್ಲಿರುವ ವಯಸ್ಕರಿಗಾಗಿ ಈ ಮಾತ್ರೆಯನ್ನು ತಯಾರಿಸಲಾಗಿದೆ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್)ಯ ಅಧ್ಯಕ್ಷ ಡಾ.ರಾಮ್ ವಿಶ್ವಕರ್ಮ ಹೇಳಿದ್ದಾರೆ.
ಪ್ಯಾಕ್ಸ್ಲೋವಿಡ್ ಮತ್ತು ಮೊಲ್ನುಪಿರವಿರ್ ಮಾತ್ರೆಗಳು ಕೋವಿಡ್ ನಿಯಂತ್ರಣದ ಔಷಧದಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಇದರಿಂದ ಕೋವಿಡ್ ಲಸಿಕೆಯ ಮೇಲಿನ ಒತ್ತಡ ಕಡಿಮೆ ಆಗಲಿದೆ ಎಂದು ತಿಳಿಸಿದ್ದಾರೆ.
ಮೊಲ್ನುಪಿರವಿರ್ ಟ್ರಯಲ್ಗೆ ಸಂಬಂಧಿಸಿದ ಡೇಟಾವನ್ನು ಭಾರತೀಯ ಔಷಧ ನಿಯಂತರಕರಿಗೆ ಸಲ್ಲಿಸಲಾಗಿದ್ದು, ಇದರ ಪರಿಶೀಲನೆ ಅಂತಿಮ ಹಂತದಲ್ಲಿದೆ. ಹೀಗಾಗಿ ಒಂದೆರಡು ದಿನಗಳಲ್ಲಿ ಈ ಮಾತ್ರೆಯ ತುರ್ತು ಬಳಕೆಗೆ ಅನುಮತಿ ಸಿಗುವ ನಿರೀಕ್ಷೆ ಇದೆ. ಭಾರತದಲ್ಲಿ ಮೊಲ್ನುಪಿರವಿರ್ ಮಾತ್ರೆ ಉತ್ಪಾದನೆಗೆ ಐದು ಕಂಪನಿಗಳ ಜತೆ ಮೆರ್ಕ್ ಒಪ್ಪಂದ ಮಾಡಿಕೊಂಡಿದೆ ಎಂದು ಡಾ.ರಾಮ್ ಹೇಳಿದ್ದಾರೆ. ಇದೇ ರೀತಿಯ ಒಂದು ಪ್ರಸ್ತಾವನೆಯನ್ನು ಬ್ರಿಟನ್ ಔಷಧ ನಿಯಂತ್ರಣ ಪ್ರಾಧಿಕಾರದ ಮುಂದೆ ಮಂಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ಯಾಕ್ಸ್ಲೋವಿಡ್ ಮಾತ್ರೆಯು ಸೋಂಕು ಪೀಡಿತರನ್ನು ಆಸ್ಪತ್ರೆವುದನ್ನು ತಡೆಯುತ್ತದೆ ಮತ್ತು ಸಾವಿನ ಅಪಾಯವನ್ನು ಶೇ.89ರಷ್ಟು ಹಿಮ್ಮೆಟ್ಟಿಸುತ್ತದೆ ಎಂದು ಫೈಜರ್ ಕಂಪನಿ ಕೂಡ ತಿಳಿಸಿದೆ.
Molnupiravir Made-In-India Anti-Covid Pills Could Be Cleared In Days
ಇದನ್ನು ಓದಿ: Corona: ದೀಪಾವಳಿ ಬಳಿಕ ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳ
ಇದನ್ನು ಓದಿ: Soon children are vaccinated too: 1 ಕೋಟಿ ಡೋಸ್ ಝೈಕೋವ್-ಡಿ ಲಸಿಕೆ ಖರೀದಿಸಲು ಕೇಂದ್ರ ಸರ್ಕಾರ ಆದೇಶ
Discussion about this post