ಚಿಕ್ಕಮಗಳೂರು: ನಗರ ಸಮೀಪದ ಹಿರೇಮಗಳೂರಿನಲ್ಲಿ ನಿರ್ಮಾಣವಾಗಿರುವ ಶುದ್ದಗಂಗಾ ಕುಡಿಯುವ ನೀರಿನ ಘಟಕದ ನಿರ್ವಹಣೆಯನ್ನು ಭಾರತೀಯ ರೆಡ್ಕ್ರಾಸ್ ಸಂಸ್ಥೆಗೆ ಒಪ್ಪಿಸುವಂತೆ ಸಂಸ್ಥೆಯ ಕಾರ್ಯದರ್ಶಿ ಡಾ.ಕೆ.ಸುಂದರಗೌಡ ನಗರಸಭಾ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಅವರು ನಗರಸಭಾ ಕಂದಾಯಾಧಿಕಾರಿ ಬಸವರಾಜ್ ಮೂಲಕ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಸುಮಾರು ೧೨ ಲಕ್ಷ ರೂ. ವೆಚ್ಚದ ಶುದ್ದಗಂಗಾ ನೀರಿನ ಘಟಕ ಶಿಥಿಲವಾಗಿದ್ದು ಇದನ್ನು ರಿಪೇರಿ ಮಾಡಿಸಿ ಸಾರ್ವಜನಿಕರಿಗೆ ಉತ್ತಮವಾದ ಸೇವೆಯನ್ನು ಒದಗಿಸಲಾಗುವುದು ಎಂದಿದ್ದಾರೆ.
ಘಟಕ ಪ್ರಾರಂಭವಾಗಿನಿಂದ ಇಲ್ಲಿಯವರೆಗೂ ನಿರುಪಯುಕ್ತವಾಗಿದ್ದು, ಸಾರ್ವಜನಿಕರು ಬಳಸಲು ಯೋಗ್ಯವಾಗಿಲ್ಲ. ಇದರ ನಿರ್ವಹಣೆಯ ಜೊತೆಗೆ ಅನುಪಯುಕ್ತ ಸ್ಥಳದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ಉಚಿತ ಶೌಚಾಲಯವನ್ನು ಭಾರತೀಯ ರೆಡ್ಕ್ರಾಸ್ ಸಂಸ್ಥೆಗೆ ನಿರ್ವಹಿಸಲು ಅನುಮತಿಯನ್ನು ನೀಡುವಂತೆ ಒತ್ತಾಯಿಸಿದ್ದಾರೆ.
ರಾಷ್ಟ್ರದಲ್ಲಿ ಶೇ.೬೫ ರಷ್ಟು ಯುವಕರು ಎಚ್ಚೆತ್ತುಕೊಳ್ಳುವವರೆಗೂ ಸಾಧನಗಳು ಗುಣಮಟ್ಟ ಕಾಪಾಡಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಜನರ ತೆರಿಗೆ ಹಣ ಅನುಪಯುಕ್ತವಾಗುತ್ತಿದ್ದು ಇದನ್ನು ತಡೆಯಲು ಯುವಪೀಳಿಗೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ನಿರ್ದೇಶಕ ಹೆಚ್.ಎನ.ಗಂಗಾಧರ್ ಮತ್ತು ಮುರುಗೇಶ್ ಇದ್ದರು.

























Discussion about this post