ನವದೆಹಲಿ: ಕುಕ್ಕರ್ ಮನೆಯ ಹೊರಗೆ ಇಟ್ಟಿದ್ದನ್ನ ನೋಡಿದ್ದ ಮಗು, ಕುಕ್ಕರ್ ನಲ್ಲೇ ಆಟ ಆಡಲು ಹೋಗಿ, ಕುಕ್ಕರ್ ಒಳಗೆ ತಲೆ ಸಿಕ್ಕಿಕೊಂಡಿತ್ತು. ಮನೆಯವರ ಪ್ರಯತ್ನಕ್ಕೆ ಕುಕ್ಕರ್ ಬಿಟ್ಟು ತಲೆ ಹೊರಗೆ ಬರಲೇ ಇಲ್ಲ.
ಆಗ್ರಾದ ಲೋಹಮಂಡಿಯ ಖಾಟಿಪುರ ಎಂಬಲ್ಲಿ ಈ ಘಟನೆ ನಡೆದಿದೆ. ಮನೆಯವರು ಎಷ್ಟೇ ಸಾಹಸ ಮಾಡಿದರೂ, ಮಗು ಸಿಕ್ಕಿಸಿಕೊಂಡ ಕುಕ್ಕರ್ ತಲೆ ಬಿಟ್ಟು ಹೊರಗೆ ಬರದ ಕಾರಣ, ಕೂಡಲೇ ವೈದ್ಯರಿಗೆ ಸುದ್ಧಿ ಮುಟ್ಟಿಸಿದ್ದಾರೆ.
ಮನೆಗೆ ಯಂತ್ರದ ಸಮೇತ ಬಂದ ವೈದ್ಯರು ಸುಮಾರು ಎರಡು ಗಂಟೆ ಪ್ರಯತ್ನ ನಡೆಸಿದರೂ ಯಶಸ್ವಿಯಾಗಲೇ ಇಲ್ಲ. ಕಡೆಗೆ ಗ್ರೈಂಡರ್ ಯಂತ್ರದ ಮೂಲಕ ಕುಕ್ಕರ್ ಕಟ್ ಮಾಡಿ ಮಗುವನ್ನು ರಕ್ಷಣೆ ಮಾಡಿದ್ದಾರೆ.

























Discussion about this post