ಕಾಬೂಲ್: ದೇಶವನ್ನೇ ನರಕ ಮಾಡಿದ್ದು ತುತ್ತು ಅನ್ನಕ್ಕೂ ಆಹಾಕಾರ ನಡೆಸುವಂತೆ ಮಾಡಿರೋ ತಾಲಿಬಾನಿಗಳು ಇದೀಗ ಮಹಿಳಾ ಉದ್ಯೋಗಿಗಳು ಸಚಿವಾಲಯದೊಳಗೆ ಬರಕೂಡದು ಎಂದು ನಿರ್ಬಂಧ ಹೇರಿದ್ದಾರೆ.
ನಾಲ್ಕುಮಹಿಳಾ ಉದ್ಯೋಗಿಗಳಿಗೆ ಈ ರೀತಿ ದಿಗ್ಬಂಧನ ಹೇರಿದ ಹಿನ್ನೇಲೆ ಎಲ್ಲಾ ಮಹಿಳಾ ಉದ್ಯೋಗಿಗಳು ಸಚಿವಾಲಯದ ಸಮೀಪ ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ.
ಬಾಯಲ್ಲಿ ಮಂತ್ರ ಹೇಳುವಂತೆ, ಇಸ್ಲಾಂ ತತ್ವಗಳ ಆಧಾರದ ಮೇಲೆ ಮಹಿಳಾಪರ ಹಕ್ಕುಗಳನ್ನು ನೀಡುವುದಾಗಿ ಹೇಳಿದ್ದ ತಾಲಿಬಾನಿ ವಕ್ತಾರಜಬಿಹುಲ್ಲಾ ಮುಜಾಹಿದ್,ಈಗ ಯಾವ ತತ್ವ ಗಳ ಆಧಾರದ ಮೇಲೆ ಹೀಗೆ ಮಾಡ್ತಿದ್ದಾರೋ ಗೊತ್ತಿಲ್ಲ.
ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಾಲಿಬಾನ್ ವಕ್ತಾರ ಸಯ್ಯದ್ಜೆಕ್ರುಲ್ಲಾ ಹಾಶಮಿ ಮಹಿಳೆಯರು ಮಂತ್ರಿಯಾಗಲು ಸಾಧ್ಯವಿಲ್ಲ, ಅವರಿಗ ಮಹತ್ವದ ಜವಾಬ್ದಾರಿಯನ್ನು ಕೊಟ್ಟರೆ ಕುತ್ತಿಗೆ ಮೇಲೆಭಾರ ಹೇರಿದಂತೆ ಆಗುವುದು, ಮಹಿಳೆಯರು ಕೇವಲ ಮಕ್ಕಳಿಗೆ ಜನ್ಮ ನೀಡಬೇಕು ಅಷ್ಟೇ ಎಂದು ತಿಳಿಸಿದ್ದರು.
ದಿನೇ ದಿನೇ ಮಹಿಳೆಯರಮೇಲೆ ತಾಲಿಬಾನಿಗಳು ನಿರ್ಬಂಧ ಹೇರುತ್ತಲೇ ಇದ್ದು, ಅಫ್ಘನ್ ನಲ್ಲಿ ಮಕ್ಕಳು ಮತ್ತು ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ.
Discussion about this post