ಚಿಕ್ಕಮಗಳೂರು: ಹಿಂದಿನ ಶರಣರು ತಾಳೆಗರಿಗಳಲ್ಲಿ ವಚನ ಸಾಹಿತ್ಯವನ್ನು ರಚಸಿ ಮನೆ ಮನೆಗೆ ನೀಡಿ ಪ್ರಚಾರ ಪಡೆಸುವ ಕಾಯಕ ಮಾಡಿದ್ದರು ಆದರೆ, ಅನೇಕರು ಈ ತಾಳೆಗರಿಗಳಲ್ಲಿರುವ ವಿಚಾರಗಳನ್ನು ಅಧ್ಯಯನ ಮಾಡದೆ. ಮೂಡನಂಬಿಕೆಯಿಂದ ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತಿದ್ದರು ಎಂದು ಬಸವತತ್ವ ಪೀಠದ ಪೀಠಾಧ್ಯಕ್ಷ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ತಿಳಿಸಿದರು.
ಅವರು ನಗರದ ಬಸವಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ವಚನ ಸಾಹಿತ್ಯ ಪಿತಮಹ ಪಕೀರಪ್ಪ ಗುರುಪ್ಪ ಹಳಕಟ್ಟಿ ನೆನಪು ಹಾಗೂ ಜಿಲ್ಲೆಯ ತರೀಕೆರೆ ತಾಲ್ಲೂಕಿನಲ್ಲಿ ತಾಳೆಗರಿಗಳನ್ನು ಸಂಗ್ರಹಿಸಿ ಅವುಗಳಲ್ಲಿರುವ ಮಾಹಿತಿಯನ್ನು ಡಿಜಿಟಲೀಕರಣ ಮಾಡುತ್ತಿರುವ ಬೆಂಗಳೂರು ಮೂಲದ ಅಶೋಕ್ ದೊಮ್ಮಲೂರು ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇದರಿಂದ ಸಾಕಷ್ಟು ವಚನ ಸಾಹಿತ್ಯ ನಾಶವಾಗಲು ಕಾರಣವಾಗಿದೆ ಎಂದು ತಿಳಿಸಿದರು.
೧೨ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯವನ್ನು ವಚನ ಸಾಹಿತ್ಯ ಪಿತಮಹ ಪಕೀರಪ್ಪ ಗುರುಪ್ಪ ಹಳಕಟ್ಟಿಯವರು ಶ್ರಮವಹಿಸಿ ಸಂಗ್ರಹಿಸದಿದ್ದರೇ, ಇನಷ್ಟು ವಚನಸಾಹಿತ್ಯ ಬೆಳಕಿಗೆ ಬಾರದೆ ನಷ್ಟವಾಗುತ್ತಿತ್ತು ಮನೆ ಮನೆಯಲ್ಲಿ ಸಂಗ್ರಹವಾಗಿದ್ದ ತಾಳೆಗರಿಗಳನ್ನು ಪಕೀರಪ್ಪ ಗುರುಪ್ಪ ಹಳಕಟ್ಟಿಯವರು ಸಂಗ್ರಹಿಸಿ ಪ್ರತಿ ಮಾಡಿ ಪ್ರಕಟಿಸಿದ್ದು, ವನಚಶಾಸ್ತ್ರಸಾರ ಎಂಬ ಮೂರು ಬೃಹತ್ ಸಂಪುಟಗಳನ್ನು ಹೊರತಂದರು. ಶರಣರಿಗೆ ಸಂಬಂಧಿಸಿದ ಎಲ್ಲಾ ವಚನಗಳನ್ನು ಪ್ರಕಟಿಸಿದರು ಎಂದು ಹೇಳಿದರು.
೧೨ನೇ ಶತಮಾನದ ವಚನ ಸಾಹಿತ್ಯವನ್ನು ಸಂಗ್ರಹಿಸಿ ಜನಸಾಮಾನ್ಯರ ಮುಂದೇ ತಂದಿಡುವ ನಿಟ್ಟನಲ್ಲಿ ಪಕೀರಪ್ಪ ಗುರುಪ್ಪ ಹಳಕಟ್ಟಿಯವರು ಬಹಳಷ್ಟು ಶ್ರಮಿಸಿದ್ದು, ಅವರ ನಿರಂತರ ಪರಿ ಶ್ರಮದಿಂದ ಇಂದು ವಚನ ಸಾಹಿತ್ಯ ಸಂವೃದ್ಧವಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು.
ಬೆಂಗಳೂರು ಮೂಲದ ಸಂಶೋಧಕ ಅಶೋಕ್ ದೊಮ್ಮಲೂರು ಸನ್ಮಾನ ಸ್ವೀಕರಿಸಿ ಮಾತ ನಾಡಿ, ಸಂಶೋಧನೆ ಮತ್ತು ಹಸ್ತಪ್ರತಿಗಳನ್ನು ಡಿಜಿಟಲೀಕರಣ ಯಾರು ಬೇಕಾದರೂ ಮಾಡ ಬಹುದು. ಹಸ್ತಪ್ರತಿಗಳು ಎಲ್ಲಿ ಸಂಗ್ರಹವಾಗಿವೆ ಎಂಬುದನ್ನು ಮೊದಲು ಪತ್ತೆ ಮಾಡಿ ಅವುಗಳನ್ನು ಡಿಜಿಟಲೀಕರಣ ಮಾಡುವುದರಿಂದ ಹಸ್ತಪ್ರತಿಗಳನ್ನು ಬಹಳಷ್ಟು ವರ್ಷಗಳ ಕಾಲ ಸಂಗ್ರಹಿಸಿಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ತಾಳೆಗರಿಗಳು ಹೆಚ್ಚು ಎಂದರೇ ೩೦೦ ವರ್ಷಗಳ ವರೆಗೆ ಮಾತ್ರ ಸಂಗ್ರಹಿಸಿಡಲು ಸಾಧ್ಯ, ಅಷ್ಟ ರೊಳಗೆ ಅವುಗಳನ್ನು ಬೇರೆ ಪ್ರತಿಗಳನ್ನು ಮಾಡಿಲ್ಲವೆಂದರೇ ಅವುಗಳನ್ನು ನಾವು ಕಳೆದು ಕೊಳ್ಳಬೇಕಾಗುತ್ತದೆ. ಬಹಳಷ್ಟು ಹಸ್ತಪ್ರತಿಗಳು ಹಾಳಾಗುತ್ತಿವೆ. ಯಾರ ಮನೆಗಳಲ್ಲಿ ಹಸ್ತ ಪ್ರತಿಗಳಿವೆ ಎಂಬುದು ಪತ್ತೆಹಚ್ಚಬೇಕು. ಅವುಗಳನ್ನು ಸಂರಕ್ಷಣೆ ಮಾಡಬೇಕು ಎಂದರು.
ಹಸ್ತಪ್ರತಿಗಳ ಸಂಗ್ರಹಿಸಿ ಅವುಗಳನ್ನು ಅಧ್ಯಯನ ಮಾಡಿ ಡಿಜಿಟಲೀಕರಣ ಮಾಡುವು ದರಿಂದ ಸಾಕಷ್ಟು ವರ್ಷಗಳು ಅದರಲ್ಲಿರುವ ಜ್ಞಾನ ಸಂಪತ್ತು ಅನೇಕ ವರ್ಷಗಳವರೆಗೂ ಸಂಗ್ರಹಿಸಿ ಮುಂದಿನ ಪೀಳಿಗೆಗೆ ನೀಡಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ತಮ್ಮ ಮನೆಗಳಲ್ಲಿ ತಾಳೆಗರಿ, ಹಸ್ತಪ್ರತಿಗಳು ಇದ್ದಲ್ಲಿ ತಿಳಿಸುವಂತೆ ಮನವಿ ಮಾಡಿದರು.
ಬಸವತತ್ವ ಪೀಠದ ಸಾಂಸ್ಕೃತಿಕ ಕಾರ್ಯದರ್ಶಿ ಬಿ.ತಿಪ್ಪೇರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಕಾರ್ಯಕ್ರಮದಲ್ಲಿ ಸಾಹಿತಿ ಕೆ.ಎಂ.ರೇವಣ್ಣ, ಪರಮೇಶ್ವರಪ್ಪ, ಅಕ್ಕಮಹಾದೇವಿ ಬಳಗ ಭದ್ರಾವತಿ ಕಾರ್ಯದರ್ಶಿ ಬಿ.ಜಿ.ಬಸವರಾಜಯ್ಯ, ಬಾಣೂರು ಚನ್ನಪ್ಪ ಹಾಗೂ ಬಸವ ತತ್ವ ಪೀಠದ ಸದಸ್ಯರು ಹಾಗೂ ಭಕ್ತರು ಇದ್ದರು.

























Discussion about this post