ನವದೆಹಲಿ: ಇಂದು ಭಾರತಕ್ಕೆ ಬಂದಿರುವ ಅಫ್ಘಾನ್ ದೇಶದ ಮಹಿಳೆ ಮುಸ್ಕಾನ್ ಹೇಳಿಕೆಯ ಪ್ರಕಾರ ತಾಲಿಬಾನಿಗಳ ಮೃತ ದೇಹಗಳ ಜೊತೆಗೂ ಲೈಂಗಿಕ ಸಂಪರ್ಕ ಹೊಂದುತ್ತಾರೆ. ಭಾರತದಲ್ಲಿ ಸುದ್ದಿ ಸಂಸ್ಥೆ ಜೊತೆಗೆ ತಮ್ಮ ಕರಾಳ ಅನುಭವ ಹಂಚಿಕೊಂಡಿದ್ದು, ‘ಶವಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಅಭ್ಯಾಸ ಹೊಂದಿದ್ದಾರೆ ತಾಲಿಬಾನಿಗಳು, ಇದನ್ನು ನೆಕ್ರೊಫಿಲಿಯಾ ಎನ್ನಲಾಗುತ್ತದೆ’ ಎಂದಿದ್ದಾರೆ.
‘ತಾಲಿಬಾನಿಗಳು ಪ್ರತಿ ಕುಟುಂಬದಿಂದ ಹೆಣ್ಣನ್ನು ಬಯಸುತ್ತಾರೆ’ ಎಂಬ ಹೇಳಿಕೆ ನೀಡಿದ್ದು, ಇದು ಸಹ ಸತ್ಯವಾಗಿದೆ, ಮನೆಯಿಂದ ಮನೆಗೆ ಗನ್ ಹಿಡಿದು ಹತ್ತು ವರ್ಷದ ಹೆಣ್ಣುಮಕ್ಕಳನ್ನು ಸಹ ಜಾನುವಾರುಗಳಂತೆ ವಾಹನಗಳಲ್ಲಿ ತುಂಬಿಕೊಂಡು ಒತ್ತಾಯದಿಂದ ಸಾಗಿಸುವ ವಿಡಿಯೋ ಇತರೆ ದೇಶೀಯರ ನಿದ್ದೆಗೆಡಿಸಿತ್ತು.
‘ನಿನ್ನೆ ಮಹಿಳೆಯೊಬ್ಬರನ್ನು ತಾಲಿಬಾನ್ ವಶಕ್ಕೆ ತೆಗೆದುಕೊಂಡಿತು, ಜಿಹಾದಿ ಗುಂಪು ಆಕೆಗೆ ಬೆದರಿಕೆ ಸಹ ಒಡ್ಡಿತ್ತು, ಆಕೆ ಕೆಲಸ ಬಿಟ್ಟು ದೇಶದಿಂದ ಪಲಾಯನ ಮಾಡಬೇಕಾಯಿತು’ ಎಂದು ನೋವು ತೋಡಿಕೊಂಡಿದ್ದಾರೆ.
Discussion about this post