ಮೂಡಿಗೆರೆ: ಇಂದಿನ ಆಫ್ಘನ್ ಪರಿಸ್ಥಿತಿ ವಿರುದ್ಧವಾಗಿ ಮೋದಿಜಿ ನಾಯಕತ್ವವೇ ವಿಶ್ವಕ್ಕೆ ಮಾದರಿ ವ್ಯಕ್ತಿ ಮತ್ತು ವ್ಯಕ್ತಿತ್ವ ನಿರ್ಮಾಣದ ಮೂಲಕ ದೇಶಕಟ್ಟುವ ಕಾರ್ಯ ಮಾಡೋಣ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಅವರು ಜನ್ನಾಪುರದ ವರ್ತಕರ ಭವನದಲ್ಲಿ ನಡೆದ ಗೋಣಿಬೀಡು ಹೋಬಳಿ ಮಹಾಶಕ್ತಿ ಕೇಂದ್ರದ ಬಿಜೆಪಿ ಹಾಗು ಯುವಮೋರ್ಚಾ ದ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿ. ಇಂದಿನ ಪರಿಸ್ಥಿತಿಯಲ್ಲಿ ಮೋದಿಜಿಯೊಂದಿಗೆ ಟ್ರಂಪ್ ಆಡಳಿತ ಅಮೆರಿಕದಲ್ಲಿ ಇರಬೇಕಿತ್ತು ಎಂದು ವಿಶ್ವವೇ ಅಂದುಕೊಳ್ಳುತ್ತಿದ್ದು ಎಂದರು.
ವ್ಯಕ್ತಿಗತವಾಗಿ ಜ್ಯೆಕಾರ ಹಾಕುವುದನ್ನು ಬಿಜೆಪಿಯ ವಿರೋದಿಸುತ್ತಿದ್ದು ಭಾರತಮಾತೆಗೆ ಜೈಕಾರ ಹಾಕುವ ಸಂಕಲ್ಪದೊಂದಿಗೆ ಕಾರ್ಯಕರ್ತರು ಮತ್ತು ಪಕ್ಷದ ನಾಯಕರುಗಳು ಮುಂದುವರಿಯುತ್ತಿದ್ದು. ಈ ಎಲ್ಲಾ ಕಾರಣದಿಂದ ದೇಶದ ಜನತೆಗೆ ಇಂದು ಜಾಗತಿಕ ರಂಗದಲ್ಲಿ ಮೋಹನ್ನತ ಮಟ್ಟಕ್ಕೆ ತಲುಪಿದ್ದು 75 ವರ್ಷಗಳ ಹಿಂದೆ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಂದಿಗೆ ಸ್ವಾತಂತ್ರ್ಯಕ್ಕಾಗಿ ದೇಹಿ ದೇಹಿ ಎಂದು ಕೇಳುತ್ತಿದ್ದವರು.
ಇಂದು ವಿಶ್ವವೇ ಭಾರತ ಮತ್ತು ಮೋದಿಜಿ ಎಂಬ ನಾಯಕತ್ವದಲ್ಲಿ ನಂಬಿಕೆ ಇಟ್ಟಿದೆ. ನಿಮ್ಮ ಒಂದೊಂದು ಮತವು ಇಂದು ಜಾಗತಿಕ ನಾಯಕನನ್ನು ಭಾರತದ ರಕ್ಷಣೆಗೆ ಕೊಟ್ಟಿದೆ. ಚೀನಾ ಪಾಕಿಸ್ತಾನಗಳ ಕೂಡ ಇಂದು ಮಂಡಿ ಊರುವಂತ ಸ್ಥಿತಿಗೆ ತಲುಪಿವೆ. ಆಫ್ಘಾನಿಸ್ತಾನದ ನಾಗರಿಕರಿಗೆ ಬಂದ ಪರಿಸ್ಥಿತಿಯು ಭಾರತೀಯರು ಸೇರಿದಂತೆ ವಿಶ್ವದ ಯಾರಿಗು ಈ ಸ್ಥಿತಿ ಬೇಡ ಎಂಬಂತೆ ಮನೋಭಾವನೆ ಎಲ್ಲೆಡೆ ಹೊಂದಿದ್ದು. ಅಲ್ಲದೆ ನಮ್ಮ ಬಿಜೆಪಿ ನೇತೃತ್ವದ ಮೋದಿಜಿ ನಾಯಕತ್ವ ಇದಕ್ಕೆ ಭಾರತ ನಾಗರಿಕ ಮತ್ತು ಸೇನೆ ಆಸ್ಪದ ಎಂದು ನೀಡುವುದಿಲ್ಲ ಎಂದರು.
ಶಾಸಕ ಎಂ ಪಿ ಕುಮಾರಸ್ವಾಮಿ ಮಾತನಾಡಿ. ಚುನಾವಣೆಗಳು ಅಗ್ನಿಪರೀಕ್ಷೆ ಇದ್ದಹಾಗೆ ಸಿಕ್ಕಿದ ಅವಕಾಶದಲ್ಲಿ ಜನಸೇವೆಯ ಮೂಲಕ ಗೆಲುವಿಗೆ ಮುನ್ನುಡಿ ಬರೆಯೋಣ ಸರಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸಿ ಚುನಾವಣೆಯಲ್ಲಿ ಮತದಾರರ ಮನ ಗೆಲ್ಲೋಣ ಎಂದರು..
ಮೈಸೂರು ಗ್ಯಾಂಗ್ ರೇಪ್ ಪ್ರಕರಣ: ಬಾಲ ಆರೋಪಿ ಸೇರಿ ಐವರ ಬಂಧನ- ಡಿಜಿ&ಐಜಿಪಿ ಪ್ರವೀಣ್ ಸೂದ್ ಮಾಹಿತಿ.
ವಿಧಾನಪರಿಷತ್ ಉಪಸಭಾಪತಿ ಪ್ರಾಣೇಶ್ ಮಾತನಾಡಿ ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದ ದೇಶ ಮೊದಲು ಪಕ್ಷ ನಂತರ ಆಮೇಲೆ ನಾನು ಎಂಬ ಸಿದ್ಧಾಂತಕ್ಕೆ ಬದ್ಧವಾಗಿದ್ದು. ಬಡವರು ಮಹಿಳೆಯರು ಕೂಲಿ ಕಾರ್ಮಿಕರು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಆಶಯ ಪ್ರಮುಖವಾಗಿದ್ದು ಇದಕ್ಕೆ ಪೂರಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿವೆ.
ಕರೋನಾ ಸಂಕಷ್ಟದ ನಡುವೆಯೂ ಉಚಿತ ಪಡಿತರ. ಅಡುಗೆ ಅನಿಲ. ದಿನ ಉಪಯೋಗಿ ವಸ್ತುಗಳು. ಔಷಧಗಳು. ವ್ಯೆದ್ಯಕಿಯ ಸಲಕರಣೆ ಸೇರಿದಂತೆ ಅನೇಕ ಯೋಜನೆಗಳನ್ನು. ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಕೈಗೊಳ್ಳಲಾಗಿದ್ದು. ಇವೆಲ್ಲವನ್ನು ಜನರಿಗೆ ಮನದಟ್ಟು ಮಾಡಿ ಮುಂದಿನ ಚುನಾವಣೆಗಳನ್ನು ಎದುರಿಸೋಣ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಕಲ್ಮರ್ಡಪ್ಪ. ರಾಜಶೇಖರ್. ಜೆಎಸ್ ರಘು ದಿನೇಶ್ ದೇವರುಂದ. ಶಿವೇಗೌಡ. ಕೆಸಿ ರತನ್. ಗಜೇಂದ್ರ ಕೊಟ್ಟಿಗೆಹಾರ. ಪಂಚಾಕ್ಷರಿ. ವಿನೋದ್ ಕಣಚೂರು. ಪುಣ್ಯಪಾಲ್. ಭರತ್ ಕನ್ನೆಹಳ್ಳಿ. ಸುನಿಲ್ ನಿಡಗೋಡು. ಅವಿನಾಶ್. ಮತ್ತಿತರರಿದ್ದರು

























Discussion about this post