ಚಿಕ್ಕ ಮಗಳೂರು: ಕೃಷಿಯೋಗ್ಯ ಭೂಮಿಯನ್ನು ಕಸಿದುಕೊಳ್ಳಲು ಹವಣಿಸುತ್ತಿರುವ ನಗರಭಿವೃದ್ಧಿ ಪ್ರಾಧಿಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕ ಹಾಗೂ ವಿವಿಧ ಪಕ್ಷದ ಮುಖಂಡರುಗಳು ಸೋಮವಾರ ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ನಗರಾಭಿವೃದ್ದಿ ಪ್ರಾಧಿಕಾರ ಹಿಟ್ಲರ್ ಆಡಳಿತ ಮಾದರಿ ಮೂಲಕ ರೈತರ ಕೃಷಿ ಭೂಮಿಯನ್ನು ಕಿತ್ತುಕೊಳ್ಳಲು ಹುನ್ನಾರ ನಡೆಸಿದೆ ಎಂದು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಹೆಚ್. ಹೆಚ್. ದೇವರಾಜ್, ಗಾಯತ್ರಿ ಶಾಂತೆಗೌಡ, ರೈತ ಸಂಘದ ಮುಖಂಡ ಗುರುಶಾಂತಪ್ಪ, ಬಸವರಾಜ್, ಸಿ.ಪಿ ಐ ಮುಖಂಡ ರೇಣುಕಾರಾಧ್ಯ, ಅಮ್ಜದ್, ರವೀಶ್ ಕ್ಯಾತನಬಿಡು, ರಸೂಲ್ ಖಾನ್, ರಾಮಚಂದ್ರ ಸೇರಿದಂತೆ ಮತ್ತಿತರರು ಇದ್ದರು.

























Discussion about this post