ಜೈಪುರ: ರಾಜಸ್ಥಾನದ ಪೊಲೀಸ್ ಇಲಾಖೆಯಲ್ಲಿರುವ ಕನಿಷ್ಠ ಐವತ್ತು ಮಂದಿ ಪೊಲೀಸರು ಲೈಂಗಿಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಆತಂಕಕಾರಿ ವಿಚಾರ ಸಾಬೀತಾಗಿದೆ. ತನಿಖಾ ವರದಿಯಲ್ಲಿ ರಾಜ್ಯ ಹಿರಿಯ ಪೊಲೀಸ್ ಮಹಾ ವರಿಷ್ಠರು ಸದರಿ ವಿಷಯದ ತನಿಖೆ ನಡೆಸಿ ವರದಿ ತಯಾರಿಸುವಂತೆ ಸೂಚನೆ ನೀಡಿದ್ದ ಹಿನ್ನೇಲೆ ಈ ಆತಂಕಕಾರಿ ವಿಚಾರ ಬಯಲಾಗಿದೆ.
ಕೆಲವು ದಿನಗಳ ಹಿಂದೆಯಷ್ಟೇ ಪೊಲೀಸ್ ಅಧಿಕಾರಿಯೊಬ್ಬರು ಮಹಿಳಾ ಕಾನ್ಸ್ ಸ್ಟೇಬಲ್ ಜೊತೆಗೆ ಸರಸ ಆಡುತ್ತಿದ್ದ ವಿಡಿಯೋ ಸಹ ವೈರಲ್ ಆಗಿತ್ತು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನೂ ಅಮಾನತ್ತಿನಲ್ಲಿಡಲಾಗಿತ್ತು. ಕೆಲವು ತಿಂಗಳುಗಳಿಂದ ರಾಜಸ್ಥಾನ ಪೊಲೀಸ್ ಇಲಾಖೆಯೊಳಗೆ ಬ್ರಷ್ಟಾಚಾರ ಮತ್ತು ಅನಾಚಾರ ಮೊದಲಾದ ಸುದ್ದಿಗಳು ಹೆಚ್ಚುತ್ತಿದ್ದು, ಅಲ್ಲಿನ ಪೊಲೀಸ್ ಇಲಾಖೆಗೆ ಇವೆಲ್ಲವೂ ತಲೆತಗ್ಗಿಸುವ ವಿಚಾರಗಳಾಗಿವೆ.

























Discussion about this post