ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ತಹಸೀಲ್ದಾರ್ ಸಿ.ಜಿ. ಗೀತಾ ಅವರು ವಿವಾಹಿತನಾಗಿದ್ದ ಗ್ರಾಮಲೆಕ್ಕಿಗ ಡಿ.ಟಿ. ಶ್ರೀನಿಧಿ ಎಂಬುವರ ಜೊತೆಗೆ ವಿವಾಹ ಮಾಡಿಕೊಂಡಿರುವ ಬಗ್ಗೆ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಷೋ ಕಾಸ್ ನೋಟಿಸ್ ನೀಡಿದ್ದಾರೆ.
ಜುಲೈ ೧೦ರಮ್ದು ಎನ್.ಆರ್. ಪುರದ ಉಪನೋಂದಣಾಧಿಕಾರಿ ಕಛೇರಿಯಲ್ಲೇ ತಹಸೀಲ್ದಾರ್ ಗೀತಾ ಹಾಗೂ ಗ್ರಾಮಲೆಕ್ಕಿಗ ಶ್ರೀ ನಿಧಿ ವಿವಾಹ ಮಾಡಿಕೊಂಡಿದ್ದಾರೆ ಎಂದು ಶ್ರೀನಿಧಿ ಪತ್ನಿ ದೂರು ನೀಡಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಕೆ. ಎನ್. ರಮೇಶ್ ನೋಟಿಸ್ ನೀಡಿದ್ದು ಪ್ರಶ್ನಿಸಿದ್ದಾರೆ. ಎನ್.ಆರ್. ಪುರದ ಸಬ್ ರಿಜಿಸ್ಟಾರ್ ಕಛೇರಿಯಲ್ಲಿ ಸಲ್ಲಿಸಿರುವ ವಿವಾಹ ನೋಂದಣಿ ಅರ್ಜಿ ಕಾಲಂ ೪(ಜಿ)ನಲ್ಲಿ ಅವಿವಾಹಿತೆ ಎಂದು ಮಾಹಿತಿ ನೀಡಿದ್ದೀರಾ…? ಅದಕ್ಕೆ ನಿಮ್ಮ ವಿವರಣೆ ಏನು? ಹಾಗೂ ವಿವಾಹಿತ ಶ್ರೀನಿಧಿ ಅವರನ್ನು ಮದುವೆ ಆಗಿರುವುದಕ್ಕೆ ನಿಮ್ಮ ಸಮರ್ಥನೆ ಏನು? ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ. ಸದರಿ ನೋಟಿಸ್ ತಲುಪಿದ ಏಳು ದಿವಸದ ಒಳಗೆ ಉತ್ತರ ನೀಡಬೇಕಾಗಿರುತ್ತದೆ.

























Discussion about this post