ನವದೆಹಲಿ: ನವದೆಹಲಿ: ಕೋವಿಡ್ ಕಾಲಘಟ್ಟದಲ್ಲಿ ವೈಯಕ್ತಿಕ ವಿತ್ತೀಯ ವಿಷಯದಲ್ಲಿ ಮೂರು ಟ್ರೆಂಡ್‌ಗಳನ್ನು ಹೊಸ ವರ್ಷದಲ್ಲಿ ಗಮನಿಸಬೇಕಿದೆ. ತಂತ್ರಜ್ಞಾನ ಆಧಾರಿತ ಹಣಕಾಸು ವ್ಯವಸ್ಥೆ ವಿಪುಲವಾಗಿ ಬೆಳೆದಿದೆ. ಹೀಗಾಗಿ ಡಿಜಿಟಲ್ ವಹಿವಾಟು ಹೊಸ ಸ್ತರ ಮುಟ್ಟಲಿದೆ.
ವೈಯಕ್ತಿಕ ಫೈನಾನ್ಸ್ ಅಪ್ಲಿಕೇಷನ್ಸ್:
ವೈಯಕ್ತಿಕ ಹಣಕಾಸು ಮತ್ತು ವೆಲ್ತ್‌ಟೆಕ್ ಅಪ್ಲಿಕೇಷನ್ಸ್‌ಗಳು ಕಳೆದೆರಡು ವರ್ಷದಿಂದ ಸರ್ವೇಸಾಮಾನ್ಯ ಆಗಿದೆ. ಕೊರೊನಾ ಕಾಲದಲ್ಲಿ ಭೌತಿಕವಾಗಿ ಹಣಕಾಸು ಕಾರ್ಯಗಳನ್ನು ನಿರ್ವಹಿಸುವ ಅಪಾಯವನ್ನು ಈ ಅಪ್ಲಿಕೇಷನ್‌ಗಳು ಕಡಿಮೆ ಮಾಡಲಿವೆ. ಭಾರತದಲ್ಲಿ 149 ಕೋಟಿ ಇಂತ ಅಪ್ಲಿಕೇಷನ್‌ಗಳು ಡೌನ್‌ಲೋಡ್ ಆಗಿವೆ.
ಡಿಜಿಟಲ್ ಜನರೇಷನ್ಸ್:
ಮಿಲೇನಿಯಲ್ಸ್ ಮತ್ತು ಜೆನ್-ಜೆಡ್‌ಗಳು ವೇಗ ಪಡೆದುಕೊಂಡಿವೆ.ಅಂದರೆ ಎಲ್ಲ ವಯೋಮಾನದವರು ಈಗ ಡಿಜಿಟಲ್ಸ್ ಅಪ್ಲಿಕೇಷನ್‌ಗೆ ಒಗ್ಗಿಕೊಳ್ಳುತ್ತಿದ್ದಾರೆ. ವಯಸ್ಸಾದವರು ಹಣಕಾಸು ಸಲಹೆಗಾರರ ಸಹಾಯವನ್ನು ಪಡೆದುಕೊಂಡು ತಮ್ಮ ಸಂಪತ್ತು ನಿರ್ವಹಿಸುತ್ತಿದ್ದಾರೆ. ಯುವ ಸಮುದಾಯವಂತೂ ಡಿಜಿಟಲ್ ಲೋಕ ಪರಿಚಯವಿರುವುದರಿಂದ ಹೆಚ್ಚು ಹೆಚ್ಚು ಸುಲಭ ಸಾಧ್ಯ ಅಪ್ಲಿಕೇಷನ್‌ಗಳ ಮೊರೆ ಹೋಗಿದೆ.
ಸಂಪತ್ತು ವೃದ್ಧಿಗೆ ವಿಶ್ವಾಸಾರ್ಹ ಮಾರ್ಗ:
ಸಂಪತ್ತು ಹೆಚ್ಚಿಸಿಕೊಳ್ಳಲು ಮಾಡುವ ಹೂಡಿಕೆಯಲ್ಲಿ ಬಹು ಎಚ್ಚರಿಕೆಯಿಂದ ಆಯ್ಕೆಗಳನ್ನು ಮಾಡಿಕೊಳ್ಳಬೇಕು. ಷೇರು, ಮ್ಯೂಚುವಲ್ ಫಂಡ್, ಚಿನ್ನ, ರಿಯಲ್ ಎಸ್ಟೇಟ್ ಈ ರೀತಿಯಲ್ಲಿ ವಿಂಗಡಣೆ ಮಾಡಿಕೊಂಡು ಹೂಡಿಕೆ ಮಾಡುವುದು ಒಳಿತು. ಇವೆಲ್ಲದಕ್ಕೂ ಸಲಹೆ ನೀಡುವಂತಹ ಅಪ್ಲಿಕೇಷನ್‌ಗಳೂ ಇವೆ.
ಜಾಗತಿಕ ಫಿನ್‌ಟೆಕ್‌ನಲ್ಲಿ ಭಾರತ ಮುಂಚೂಣಿಯಲ್ಲಿದೆ. ವಿಶೇಷವಾಗಿ ಯುವ ಸಮುದಾಯ ಆರ್ಥಿಕಕತೆ ಅಭಿವೃದ್ಧಿಗೆ ಟೆಕ್ನಾಲಜಿಯನ್ನು ಹೆಚ್ಚಾಗಿ ಅವಲಂಬಿಸಿದೆ. ಬಿಟ್‌ಕಾಯಿನ್, ಬ್ಲಾಕ್‌ಚೈನ್‌ಗಳಂತಹ ಹೊಸ ಆರ್ಥಿಕ ಹೂಡಿಕೆಗೆ ಹೆಚ್ಚು ಒತ್ತು ನೀಡಿವೆ.
Three Personal Finance Trends To Watch Out For In 2022
ಇದನ್ನು ಓದಿ: ಪೋರ್ಟ್ ರಿಕೊ ಕ್ರಿಪ್ಟೊ ಕರೆನ್ಸಿ ಹೂಡಿಕೆ, ಆಸ್ತಿ ಖರೀದಿಯ ಸ್ವರ್ಗ
ಇದನ್ನೂ ಓದಿ: Bitcoin Explainer: ಬಿಟ್‌ಕಾಯಿನ್ ಎಂದರೇನು? ವಹಿವಾಟು ಹೇಗೆ ನಡೆಯುತ್ತೆ? ಇಲ್ಲಿದೆ ವಿವರ
Discussion about this post