ಚಿಕ್ಕಮಗಳೂರು : ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಕಟ್ಟುತ್ತಿರುವ ಭಾರೀ ದೊಡ್ಡ ಮನೆಗೆ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ. ಅಕ್ರಮ ಮರಳು ಸಾಗಾಣಿಕೆ ಮಾಡುವ ಬಗ್ಗೆ ಶಾಸಕರ ವಿರುದ್ಧ ಸ್ಥಳೀಯರು ಆರೋಪ ಮಾಡಿದ್ದಾರೆ, ಹಾಗೂ ಈ ಕುರಿತು ವಿಡಿಯೋ ಕೂಡ ಸಂಗ್ರಹಿಸಿದ್ದಾರೆ.
ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ಕೋಟ್ಯಾಂತರ ರೂ. ಬೆಲೆ ಬಾಳುವ ಮನೆ ನಿರ್ಮಾಣ ಮಾಡುತ್ತಿದ್ದಾರೆ. ನಿರ್ಮಾಣ ಕಾರ್ಯಕ್ಕೆ ವಾರದಲ್ಲಿ ಹತ್ತರಿಂದ ಹದಿನೈದು ಲೋಡ್ ಮರಳನ್ನು ಅಕ್ರಮವಾಗಿ ತರಲಾಗುತ್ತದೆ ಎಂಬ ಗಂಭೀರ ಆರೋಪ ಕಾಂಗ್ರೆಸ್ ಮುಖಂಡ ಚಂದ್ರು ಓಡೆಯರ್ ಮಾಡಿದ್ದಾರೆ.
ತಾಲೂಕಿನ ಉದುಸೆ ಎಂಬಲ್ಲಿ ಮರಳು ಕ್ವಾರೆಯಿದೆ. ಮಳೆಗಾಲದ ಸಮಯ ಆದ್ದರಿಂದ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯವರು ಮರಳು ತೆಗೆಯಲು ನಿರ್ಬಂಧವನ್ನು ವಿಧಿಸಿದ್ದಾರೆ. ಸಮೀಪದ ಮುಗ್ರಹಳ್ಳಿ ಬಳಿ ಕಳ್ಳ ಮಾರ್ಗದಲ್ಲಿ ಮರಳನ್ನು ಕದ್ದು ತರಲಾಗುತ್ತಿದೆ. ಶಾಸಕರ ಮನೆಯ ಕಾರ್ಯಕ್ಕೆ ಮುಗ್ರಿಹಳ್ಳಿಯ ಮರಳನ್ನು ಬಳಸಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಮೂಡಿಗೆರೆ ಶಾಸಕರ ಮನೆಗೆ ಕದ್ದು ಮರಳು ಸಾಗಿಸುತ್ತಿರುವುದನ್ನ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿ ವರ್ಗದವರು ಮಾತ್ರ ಈ ಕುರಿತು ಏನೂ ಚಕಾರವೆತ್ತುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ

























Discussion about this post