- ನದಿಗಳಂತೆ ಹರಿದು ಬಂದ ಸಾವಿರಾರು ರೈತರು
- ಜಲಫಿರಂಗಿ ಪ್ರಯೋಗ
- 5 ಕಿಮೀ. ಪಾದಾಯಾತ್ರೆ
- ರೈತರ ತಲೆ ಒಡೆಯಿರಿ ಅಂದಿದ್ದ ಅಧಿಕಾರಿ ವಜಾಕ್ಕೆ ಆಗ್ರಹ
ಕರ್ನಾಲ್: ರೈತರ ಮೇಲೆ ಕಳೆದ ತಿಂಗಳು ನಡೆದಿತ್ತು ಎನ್ನಲಾದ ಲಾಠಿ ಪ್ರಹಾರ ಖಂಡಿಸಿ, ಮಂಗಳವಾರ ಹರಿಯಾಣದಲ್ಲಿ ರೈತ ಸಮೂಹ ಜಿಲ್ಲಾ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ.
ಪ್ರತಿಭಟನಾಕಾರ ರೈತರ ತಲೆ ಒಡೆಯಿರಿ ಎಂದಿದ್ದ ಐಎ ಎಸ್ ಅಧಿಕಾರಿಯನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ರೈತ ಮುಖಂಡರು ಇದೇ ವೇಳೆ ಆಗ್ರಹಿಸಿದರು. ರೈತರು ಪಾದಾಯಾತ್ರೆ ನಡೆಸಿದ್ದು, ಅದನ್ನು ಚದುರಿಸಲು ಜಲಫಿರಂಗಿ ಬಳಸಿದ ಸರ್ಕಾರ.
ರೈತರನ್ನು ತಡೆಯಲು ಪೊಲೀಸ್ ಸೇರಿದಂತೆ ಅರೆ ಸೇನಾ ತುಕಡಿ ಪ್ರಯೋಗಿಸಿದ ಸರ್ಕಾರ. ಇದೇ ವೇಳೆ ೫ ಜಿಲ್ಲೆಗಳಲ್ಲಿ ಎಸ್ ಎಮ್ ಎಸ್ ಸೇರಿದಂತೆ ಇಂಟರ್ನೆಟ್ ಕಡಿತಗೊಳಿಸಲಾಗಿತ್ತು. ಮಹಾಪಂಚಾಯತ್ ಎಂಬ ಸ್ಥಳದಿಂದ ಐದು ಕಿ.ಮೀ. ಪಾದಾಯಾತ್ರೆ ಹೊರಟಿದ್ದು, ಜಿಲ್ಲಾ ಕಾರ್ಯಾಲಯ ಮುತ್ತಿಗೆ ಹಾಕಿದ್ದರು. ಜಿಲ್ಲಾಧಿಕಾರಿಗಳು ರೈತ ಮುಖಂಡರ ಮನವೊಲಿಸಲು ವ್ಯರ್ಥ ಪ್ರಯತ್ನ ನಡೆಸಿದರು.

























Discussion about this post