ಚಿಕ್ಕಮಗಳೂರು: ಕೋವಿಡ್ ನಿಯಮಾನುಸಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರ ಅನುಮತಿ ನೀಡಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಜಿಲ್ಲಾ ಶ್ರೀರಾಮ ಸೇನೆ ಘಟಕ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಮನವಿ ಸಲ್ಲಿಸಿತು.
ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್‍ಶೆಟ್ಟಿ ಮಾತನಾಡಿ ರಾಜಕೀಯ ಸಮಾವೇಶ, ಚುನಾವಣೆ, ಶಾಲಾ-ಕಾಲೇಜುಗಳ ಆರಂಭಕ್ಕೆ ಸರ್ಕಾರ ಹೇಗೆ ಕೋವಿಡ್ ನಿಯಮಾನುಸಾರ ಅನುಮತಿ ನೀಡಲಾಗಿದೆಯೋ ಅದೇ ನಿಯಮದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಬೇಕು ಎಂದರು.
ಕೋವಿಡ್ ಹಿನ್ನಲೆ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ನಿಷೇಧಿಸಿದೆ. ಆದರೆ ಇತ್ತೀಚಿಗೆ ಜನಜೀವನ, ಚಟುವಟಿಕೆಗಳು ನಿಧಾನಗತಿಯಲ್ಲಿ ತೆರೆದುಕೊಳ್ಳುತ್ತಿದ್ದ ಹಬ್ಬದ ನಿರ್ಬಂಧದಿಂದಾಗಿ ಶಾಮಿಯಾನ, ವಿದ್ಯುತ್, ವಾದ್ಯವೃಂದ, ಗಣೇಶ ಮೂರ್ತಿ ತಯಾರಕರು ಸೇರಿದಂತೆ ಅನೇಕು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿಲಿವೆ ಎಂದರು.
ನೂರಾರು ವರ್ಷಗಳಿಂದ ನಡೆದು ಬಂದಿರುವ ಸಾರ್ವಜನಿಕ ಗಣೇಶೋತ್ಸವವನ್ನು ಕೋವಿಡ್ ನಿಯಮಾನುಸಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಶ್ರೀರಾಮ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್, ಜಿಲ್ಲಾ ಉಪಾಧ್ಯಕ್ಷ ದಿಲೀಪ್‍ಶೆಟ್ಟಿ, ವಂದೇಮಾತರಂ ಟ್ರಸ್ಟ್‍ನ ನಿತೇಶ್, ಅನಿಲ್ ಆನಂದ್, ಯೋಗಿ ಸಂಜಿತ್ ಸುವರ್ಣ ಇದ್ದರು.

























Discussion about this post