ಚಿಕ್ಕಮಗಳೂರು: ಜಿಲ್ಲೆಯ ಬೀರೂರಿನ ಪ್ರೌಢಶಾಲೆಯೊಂದರ ಮಕ್ಕಳಿಗೆ ಸಿಂಪಲ್ ಗುರು ದತ್ತಣ್ಣ ಪಾಠ ಸಖತ್ ಖುಷಿ ಕೊಟ್ಟಿದ್ದು,ವಿದ್ಯಾರ್ಥಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಶಿಕ್ಷಕರ ದಿನಾಚರಣೆ ನಿಮಿತ್ತ SSLC ವಿದ್ಯಾರ್ಥಿಗಳಿಗೆ ಗಣಿತ ಪಠ್ಯದ ಅಂಕಗಣಿತದ ಸಮಾನಾಂತರ ಶ್ರೇಣಿ ಪಾಠದ ಬೋಧನೆಯನ್ನು ದತ್ತಣ್ಣ ಬೋದಿಸಿದ್ದರು.
ಇದೇ ವೇಳೆ ಗಣಿತದ ಕ್ಲಿಷ್ಟಕರವಾದ ವಿಷಯಗಳನ್ನು ಕಾಲಹರಣ ಮಾಡದೆ ಚೆನ್ನಾಗಿ ಕಲಿಯಬೇಕೆಂದು ಕಿವಿ ಮಾತು ಹೇಳಿದರು. ಶಿಕ್ಷಕರು ಬೋದನೆ ಮಾಡಿದ ಸಮಾನಾಂತರ ಶ್ರೇಣಿ, ವರ್ಗ ಸಮೀಕರಣ, ಲಾಸ, ಮಾಸ, ಅಪವರ್ತನ, ಭಾಗಾಕಾರ, ಪ್ರಮೇಯ ಮೊದಲಾದ ವಿಷಯಗಳನ್ನು ಆಸಕ್ತಿ ಇಟ್ಟುಕಲಿಯಬೇಕೆಂದುಳಿದರು.
ದತ್ತ ಮೇಷ್ಟ್ರುಪಾಟ ಸುಲಭವಾಗಿ ಕಷ್ಟದ ಲೆಕ್ಕಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ ಎಂದು ವಿದ್ಯಾರ್ಥಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದೇ ವೇಳೆ ಕೆಎಲ್ ಕೆ ಪ್ರೌಢಶಾಲಾ ಉಪಪ್ರಾಂಶುಪಾಲೆ ಪುಷ್ಪಾಂಜಲಿ ಸೇರಿದಂತೆ ಬೋಧಕ ವರ್ಗದ ಜೊತೆಗೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

























Discussion about this post