ಚಿಕ್ಕಮಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ಕುಮಾರ್ ಮೊಟ್ಟ ಮೊದಲ ಬಾರಿಗೆ ಅಕ್ಟೋಬರ್ 4 ರಂದು ಜಿಲ್ಲೆಗೆ ಆಗಮಿಸುತ್ತಿದ್ದು ಸ್ನೇಹ ಬಳಗದ ವತಿಯಿಂದ ಕೃತಜ್ಞತಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸ್ನೇಹಬಳಗ ತಂಡದ ಸದಸ್ಯ ಲೋಕೇಶ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ದತ್ತಪೀಠ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿದ್ದ ಅವರು ಜಿಲ್ಲೆಯಲ್ಲಿ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ, ಭಜರಂಗದಳದ ಸದಸ್ಯರಾಗಿ, ಎಬಿವಿಪಿ ಯಲ್ಲಿ ಸಕ್ರಿಯರಾಗಿ ಜಿಲ್ಲೆಯ ಜನತೆಯೊಂದಿಗೆ ಹೆಚ್ಚು ಒಡನಾಟ ಹೊಂದಿದ್ದರು.
ಮಂತ್ರಿಯಾದ ಬಳಿದ ಮೊದಲ ಬಾರಿಗೆ ಅ.೪ ರಂದು ಜಿಲ್ಲೆಗೆ ಆಗಮಿಸುತ್ತಿದ್ದು ಸ್ನೇಹಬಳಗದ ವತಿಯಿಂದ ಕುವೆಂಪು ಕಲಾಮಂದಿರದಲ್ಲಿ ಸಂಜೆ ೪.೦೦ ಗಂಟೆಗೆ ಅವರ ಏಳಿಗೆಗೆ ಸಹಕರಿಸಿದ ಹಿತೈಷಿಗಳು, ಅಭಿಮಾನಿಗಳಿಂದ ಅವರಿಗೆ ಕೃತಜ್ಞತಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಅ.೪ ರಂದು ಬೆಳಗ್ಗೆ ದತ್ತಪೀಠಕ್ಕೆ ತೆರಳಿದ್ದು, ಬಳಿಕ ಭಜರಂಗದಳ ಕಛೇರಿಗೆ ಭೇಟಿ, ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಜಿಲ್ಲಾ ಕೇಂದ್ರ ಕಛೇರಿಯಲ್ಲಿ ಸಭೆಯಲ್ಲಿ ಭಾಗವಹಿಸಿ ಸಂಜೆ ೪.೦೦ಗಂಟೆಗೆ ಕೃತಜ್ಞತಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಹೆಚ್.ಡಿ.ತಮ್ಮಯ್ಯ, ಶ್ರೀಕಾಂತ್ ಪೈ, ದೇವರಾಜ್ಶೆಟ್ಟಿ, ಯೋಗೇಶ್, ರಾಜಪ್ಪ ಇದ್ದರು.

























Discussion about this post