ವಾಷಿಂಗ್ಟನ್: ಹಾಲಿವುಡ್ ಲೆಜೆಂಡರಿ ನಟ ಎಡ್ ಅಸ್ನರ್ ಇನ್ನಿಲ್ಲ. ಈ ನಟ ತನ್ನ ೫೦ರ ಹರಯದಲ್ಲಿ ಶೋಬಿಜ್ ಪ್ರವೇಶಿಸಿದ್ದರು. ಪ್ರತಿಷ್ಠಿತ ಅಂತರಾಷ್ಟ್ರೀಯ ಎಮ್ಮಿ ಅವಾರ್ಡ್ ಅನ್ನು ೭ ಭಾರಿ ತಮ್ಮದಾಗಿಸಿಕೊಡ ಖ್ಯಾತಿ ಹೊಂದಿದ್ದರು.
ದಿ ಮೇರಿ ಟೈಲರ್ ಮೂರ್ ಶೋ ಮೂಲಕ ಅತ್ಯಂತ ಜನಪ್ರಿಯತೆ ಗಳಿಸಿದ್ದರು.
ಸರಣಿಯ ಸುಮಾರು ೧೬೬ ಸಂಚಿಕೆಗಳಲ್ಲಿ ಅನ್ಸರ್ ನಟಿಸಿದ್ದು, ೭ ವರ್ಷಗಾಳ ಸುದೀರ್ಘ ಪಯಣ ನಡೆಸಿದ್ದರು.
ಹಾಸ್ಯ ಸರಣಿಯ ನಟನೆ ಜನಪ್ರಿಯತೆಯನ್ನು ಹೊಂದಿರುವಾಗಲೇ, ಎಡ್ ಅಸ್ನರ್ “ಲೌ ಗ್ರಾಂಟ್” ಎಂಬ ಮತ್ತೊಂದು ಷೋ ಪ್ರಾರಂಭಿಸಿದರು. ಇದರಲ್ಲಿಯೂ ಶತಕಕ್ಕೂ ಹೆಚ್ಚು ಸಂಚಿಕೆಗಳಲ್ಲಿ ತಮ್ಮ ಅಭಿನಯ ಪ್ರದರ್ಶಿಸಿದ್ದರು.
ಎಡ್ ಅಸ್ನರ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕುಟುಂಬ ಸದಸ್ಯರು ಈ ಸುದ್ಧಿ ಹಂಚಿದ್ದು, ನಮ್ಮ ತಂದೆ ಇಂದು ಬೆಳಿಗ್ಗೆ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ನೋವನ್ನು ವ್ಯಕ್ತಪಡಿಸಲು ಪದಗಳಿಲ್ಲ, ನಿಮ್ಮನ್ನು ಪ್ರೀತಿಸುತ್ತೇವೆ ಅಪ್ಪ’ ಎಂದು ಹಂಚಿಕೊಂಡಿದ್ದಾರೆ.
Discussion about this post