ಆಲಿಘಡ: ಗಂಡನೊಬ್ಬ ತನ್ನ ಹೆಂಡತಿ ದಿನವೂ ಸ್ನಾನ ಮಾಡುವುದಿಲ್ಲ. ಸ್ವಚ್ಛತೆಯ ಬಗ್ಗೆ ಜ್ಞಾನವಿಲ್ಲದ ಆಕೆಯೊಂದಿಗೆ ಸಂಸಾರ ನಡೆಸಲು ಸಾಧ್ಯವಿಲ್ಲ ಎಂದು ತ್ರಿವಳಿ ತಲಾಖ್ ನೀಡಿದ ಘಟನೆ ನಡೆದಿದೆ. ಉತ್ತರ ಪ್ರದೇಶದಲ್ಲಿ ತನ್ನ ಹೆಂಡತಿ ದಿನವೂ ಸ್ನಾನ ಮಾಡುವುದಿಲ್ಲ ಎಂಬ ಕಾರಣಕ್ಕೆ ಆಕೆಗೆ ಡೈವೋರ್ಸ್ ನೀಡಿದ್ದಾನೆ ಗಂಡ.
ಮುಸ್ಲಿಂ ಸಮುದಾಯದ ವ್ಯಕ್ತಿಯೋರ್ವ ತನ್ನ ಹೆಂಡತಿ ದಿನವೂ ಸ್ನಾನ ಮಾಡುವುದಿಲ್ಲ. ಆಕೆಯೊಂದಿಗೆ ಸಂಸಾರ ನಡೆಸಲು ಸಾಧ್ಯವಿಲ್ಲ ಎಂದು ತ್ರಿವಳಿ ತಲಾಖ್ ನೀಡಿದ್ದಾರೆ. 2 ವರ್ಷಗಳ ಹಿಂದೆ ಕ್ವಾರ್ಸಿ ಗ್ರಾಮದ ಆ ಮಹಿಳೆ ಚಂದೌಸ್ ಗ್ರಾಮದ ಪುರುಷನೊಂದಿಗೆ ಮದುವೆಯಾಗಿದ್ದಳು.
ತ್ರಿವಳಿ ತಲಾಖ್ಗೆ ನಿಷೇಧವಿದ್ದರೂ ನನಗೆ ತಲಾಖ್ ನೀಡಿದ್ದಾರೆ ಎಂದು ಆತನ ಹೆಂಡತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ. ಆ ಗಂಡ-ಹೆಂಡತಿ ಇಬ್ಬರಿಗೂ ಕೌನ್ಸಿಲಿಂಗ್ ನಡೆಸಲಾಗುತ್ತಿದೆ. ದಿನವೂ ಸ್ನಾನ ಮಾಡುತ್ತಿಲ್ಲ ಎಂಬ ನೆಪವೊಡ್ಡಿ ಗಂಡ ತಲಾಖ್ ನೀಡಿರುವುದಾಗಿ ಮಹಿಳೆ ದೂರು ನೀಡಿದ್ದಾಳೆ.
ಆ ದಂಪತಿಗೆ ನಾವೇ ಕೌನ್ಸಿಲಿಂಗ್ ಕೊಡಿಸುತ್ತಿದ್ದೇವೆ. ಅವರ ಪೋಷಕರ ಜೊತೆಯೂ ಈ ಬಗ್ಗೆ ಮಾತನಾಡಿದ್ದೇವೆ. ಆ ಮಹಿಳೆಗೆ ತನ್ನ ಗಂಡನ ಜೊತೆ ಬದುಕಬೇಕೆಂಬ ಆಸೆಯಿದೆ. ಹೀಗಾಗಿ, ಅವರ ಮದುವೆಯನ್ನು ಉಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದರಿ ಪ್ರಕರಣದಲ್ಲಿ ಆಗಾಗ್ಗೆ ಸಣ್ಣ ಪುಟ್ಟ ವಿಷಯಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಈಗ ಅವರಿಗೆ ಮಗು ಕೂಡ ಇದ್ದು, ವಿಚ್ಛೇದನವಾದರೆ ಆ ಮಗುವಿನ ಭವಿಷ್ಯ ಹಾಳಾಗಲಿದೆ ಎಂದು ಪಾಲಕರಿಗೆ ಅರ್ಥ ಮಾಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
Discussion about this post