ಚಿಕ್ಕಮಗಳೂರು: ಜಿಲ್ಲಾ ಪೋಲೀಸ್ ಕಛೇರಿಯ ಕಂಪ್ಯೂಟರ್ ವಿಭಾಗದಲ್ಲಿ ಉತ್ತಮ ಕರ್ತವ್ಯ ಸಲ್ಲಿಸಿದ್ದ ಹಿನ್ನೇಲೆಯಲ್ಲಿ ಪ್ರತಿಷ್ಠಿತ ರಾಷ್ಟ್ರಪತಿ ಪೋಲೀಸ್ ಪದಕಕ್ಕೆ ರಾಜಪ್ಪ ಕುಮಾರ್ ಭಾಜನರಾಗಿದ್ದಾರೆ.
ಭಾರತ ಸರ್ಕಾರದಿಂದ ಸ್ವಾತಂತ್ರ್ಯೋತ್ಸವ 2021ರಂದು ನೀಡುವ ಪ್ರತಿಷ್ಠಿತ ಚಿಕ್ಕಮಗಳೂರಿನ ಹೆಡ್ ಕಾನ್ಸ್ ಟೇಬಲ್ ರಾಜಪ್ಪನವರಿಗೆ ಸಂಧಿದೆ. ಇವರು 1999ರ ಬ್ಯಾಚ್ ನಲ್ಲಿ ಪೋಲೀಸ್ ಸೇವೆಗೆ ಆಯ್ಕೆಯಾಗಿದ್ದರು.
ಇತ್ತೀಚೆನ ಸಾಫ್ಟ್ ವೇರ್ ಗಳನ್ನು ಚೆನ್ನಾಗಿ ಕರಗತ ಮಾಡಿಕೊಂಡಿರುತ್ತಾರೆ. 20 ವರ್ಷ ಅತ್ಯುತ್ತಮ ಸೇವೆ ಸಲ್ಲಿಸಿ, ಇಲಾಖೆ ನಡೆಸುವ ಆಂತರಿಕ ಪರೀಕ್ಷೆಗಳಲ್ಲಿ ತೇರ್ಗಡೆಯಾದವರನ್ನು ಈ ಪದಕಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಅಕ್ಷಯ್ ಹಾಕೆ ತಿಳಿಸಿದ್ದಾರೆ.

























Discussion about this post