ಹೈದರಾಬಾದ್: ಕೋಲ್ಕತ ಮತ್ತು ದೆಹಲಿ ಮೂಲದ ಇಬ್ಬರು ಸಲಿಂಗಿ ಪುರುಷರು ತಮ್ಮ ಸಂಬಂಧವನ್ನು ಶನಿವಾರ ವೈವಾಹಿಕ ಕಟ್ಟುಪಾಡಿಗೆ ಬದಲಿಸಿಕೊಂಡರು. ಕೋಲ್ಕತದ ಸುಪ್ರಿಯೊ ಚಕ್ರವತಿರ್ (31) ಮತ್ತು ದೆಹಲಿಯ ಅಭಯ್ ಡಾಂಗ್ (34) ಉಂಗುರ ಮತ್ತು ಹಾರ ಬದಲಾವಣೆ ಮಾಡಿಕೊಂಡು ಬಂಗಾಳಿ ಮತ್ತು ಪಂಚಾಬಿ ಸಂಪ್ರದಾಯದಂತೆ ವಿವಾಹವಾದರು.ಮೆಹಂದಿ, ಹಳ್ದಿ, ಗಾನ, ನೃತ್ಯದ ಕಾರ್ಯಕ್ರಮಗಳೂ ನಡೆದವು. ಇವರಿಬ್ಬರ ಮದುವೆಗೆ ಕುಟುಂಬದವರು ಮತ್ತು ಸ್ನೇಹಿತರು ಸಾಕ್ಷಿಯಾದರು.
ಸುಪ್ರಿಯೊ ಪ್ರತಿಷ್ಠಿತ ಹೋಟೆಲ್ ಆಡಳಿತ ಸಂಸ್ಥೆಯೊಂದರ ಉಪನ್ಯಾಸಕರಾಗಿದ್ದರೆ, ಅಭಯ್ ದೆಹಲಿಯಲ್ಲಿ ಬಹು ರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗಿ. ಇವರು ಎಂಟು ವರ್ಷಗಳಿಂದ ಸಂಬಂಧ ಹೊಂದಿದ್ದು, ಈಗ ಅಧಿಕೃತವಾಗಿ ಸಂಗಾತಿಗಳಾದರು. “ಮೊದಲು ನಮ್ಮಿಬ್ಬರ ಸಂಬಂಧದ ಬಗ್ಗೆ ತಿಳಿದ ನಮ್ಮ ಕುಟುಂಬದವರು ಆಶ್ಚರ್ಯಚಕಿತರಾದರು, ಬೇಸರಗೊಂಡರು. ಆದರೆ ನಂತರದಲ್ಲಿ ನಮ್ಮ ಬದುಕನ್ನು ನಾವು ಬಯಸಿದಂತೆ ಬದುಕಲು ಒಪ್ಪಿಕೊಂಡರು. ಹೃದಯತುಂಬಿ ಆಶೀರ್ವದಿಸಿದರು’ ಎಂದು ಸುಪ್ರಿಯೊ ಹಿಂದಿನದನ್ನು ಸ್ಮರಿಸಿದ್ದಾರೆ
“ಸಮಾಜ ಕೂಡ ವಿಮಶಾತ್ಮಕವಾಗಿ ನೋಡಿ, ನಮ್ಮನ್ನು ಒಪ್ಪಿಕೊಂಡರೆ ನಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಮುಂದೆ ಬರುವ ನಮ್ಮಂಥ ಜೋಡಿಗಳಿಗೆ ಬದುಕು ಸಹನಿಯವಾಗುತ್ತದೆ’ ಎಂದಿದ್ದಾರೆ.
“ಸುಪ್ರಿಯೊವನ್ನು ನನ್ನ ಸಂಗಾತಿ ಎಂದು ಹೇಳಿಕೊಳ್ಳಲು ತುಂಬ ಸಂತಸವಾಗುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ಕುಟುಂಬದವರು ಮತ್ತು ಸ್ನೇಹಿತರು ನಮ್ಮನ್ನು ಒಪ್ಪಿಕೊಂಡಿದ್ದು ಹೆಮ್ಮೆ ಎನಿಸುತ್ತದೆ’ ಎಂದು ಅಭಯ್ ಹೇಳಿದ್ದಾರೆ.
ಭಾರತದಲ್ಲಿ ಸಲಿಂಗಿಗಳ ವಿವಾಹವು ಕಾನೂನುಬದ್ಧವಲ್ಲ. ಆದರೆ, ಇದು ಅಪರಾಧವೂ ಅಲ್ಲ. 2018ರಲ್ಲಿ ಸುಪ್ರೀಂಕೋರ್ಟ್ ಸಲಿಂಗಗಳ ಲೈಂಗಿಕತೆಯನ್ನು ಅಪರಾಧ ಪಟ್ಟಿಯಿಂದ ಕೈಬಿಡಲು ಆದೇಶಿಸಿದೆ.
Hyderabad Gay Couple Get Married
ಇದನ್ನು ಓದಿ: ಮಹಿಳೆಯರ ಕಾನೂನುಬದ್ಧ ವಿವಾಹ ವಯಸ್ಸು 18 ರಿಂದ 21ಕ್ಕೆ ಏರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ
ಇದನ್ನೂ ಓದಿ: ಮಹಿಳಾ ಕ್ರಿಕೆಟರ್ ಮೇಗನ್ ಪತ್ನಿಗೆ ತಾಯ್ತನ ಭಾಗ್ಯ
Discussion about this post