ಚಿಕ್ಕಮಗಳೂರು: ಭಾರತದ ಆರೋಗ್ಯ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಅಮೃತಾಂಜನ್ ಹೆಲ್ತ್‍ಕೇರ್, ಟೋಕಿಯೊ 2020 ಒಲಂಪಿಕ್ ಗೇಮ್ಸ್, ವೇಟ್ ಲಿಫ್ಟಿಂಗ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಮತ್ತು ಕುಸ್ತಿ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯ ನಿರ್ವಹಿಸಲು ಒಪ್ಪಂದ ಮಾಡಿಕೊಂಡಿದ್ದಾರೆ.
ಪಾಲುದಾರಿಕೆಯ ಭಾಗವಾಗಿ, ಬ್ರಾಂಡ್ ಅಂಬಾಸಿಡರ್‍ಗಳು ಅಮೃತಾಂಜನ್‍ನ ಸುಧಾರಿತ ಬ್ಯಾಕ್ ಪೈನ್ ರೋಲ್-ಆನ್, ಜಾಯಿಂಟ್ ಮಸಲ್ ಸ್ಪ್ರೇ ಮತ್ತು ಪೈನ್ ಪ್ಯಾಚ್ ಉತ್ಪನ್ನಗಳ ದೂರದರ್ಶನ ಮತ್ತು ಡಿಜಿಟಲ್ ಜಾಹೀರಾತುಗಳನ್ನು ಒಳಗೊಂಡಂತೆ ಸರಣಿ ಪ್ರಚಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಎಲ್ಲ ಉತ್ಪನ್ನಗಳು ಆರೋಗ್ಯ, ವಿಜ್ಞಾನ ಮತ್ತು ಪ್ರಕೃತಿಯ ವಿಶಿಷ್ಟ ಮಿಶ್ರಣವಾಗಿದ್ದು ಆಯುರ್ವೇದದ ಮೂಲಿಕೆಗಳಿಂದ ಕೂಡಿದೆ. ಈ ಇಬ್ಬರು ಕ್ರೀಡಾಪಟುಗಳು ಗ್ರಾಹಕರು ಮತ್ತು ಗ್ರಾಹಕರ ಸಂಪರ್ಕ ಕಾರ್ಯಕ್ರಮಗಳಂತಹ ವಿವಿಧ ಅಭಿಯಾನಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಎಸ್. ಶಂಭು ಪ್ರಸಾದ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕಂಪನಿಯು ಈಗ ವೈಜ್ಞಾನಿಕ ಕ್ಲಿನಿಕಲ್ ಪ್ರಯೋಗಗಳ ಬೆಂಬಲದೊಂದಿಗೆ ಕಾರ್ಯಕ್ಷಮತೆ-ಆಧಾರಿತ ಕ್ಲೈಮ್‍ಗಳೊಂದಿಗೆ ಬರುವ ಹೆಚ್ಚಿನ ಉತ್ಕøಷ್ಟವಾದ ನೋವು ನಿರ್ವಹಣಾ ಉತ್ಪನ್ನಗಳನ್ನು ನೀಡುವ ಮೂಲಕ ತನ್ನ ಬಂಡವಾಳವನ್ನು ಬೆಳೆಯುವತ್ತ ಗಮನ ಹರಿಸಿದೆ. ಹೆಮ್ಮೆಯ ಭಾರತೀಯ ಬ್ರಾಂಡ್ ಆಗಿ, ಒಲಂಪಿಕ್ ಚಾಂಪಿಯನ್ನರ ಜತೆ ಸಹಿ ಮಾಡುವುದು ನಮಗೆ ಅಪಾರ ಸಂತಸ ತಂದಿದೆ ಎಂದು ಚೀಫ್ ಮಾರ್ಕೆಟಿಂಗ್ ಆಫೀಸರ್ ಶ್ರೀ ಮಣಿ ಭಗವತೀಶ್ವರನ್ ವಿವರಿಸಿದ್ದಾರೆ.
ಈ ಸಹಯೋಗದ ಬಗ್ಗೆ ಮಾತನಾಡಿದ ಮೀರಾಬಾಯಿ ಚಾನು ಮತ್ತು ಭಜರಂಗ್ ಪುನಿಯಾ “ಕ್ರೀಡಾಪಟುವಾಗಿ, ನಾವು ದೈಹಿಕ ನೋವನ್ನು ಸಹಿಸಿಕೊಳ್ಳಬೇಕಾಗುತ್ತದೆ. ನೋವು ಬಹುತೇಕ ಅಸಹನೀಯವಾಗಿದ್ದ ದಿನಗಳಲ್ಲಿ, ಅಮೃತಂಜನ್‍ನ ಪೈನ್ ರಿಲೀಫ್ + ಪ್ಯಾಚ್ ಮತ್ತು ಬ್ಯಾಕ್‍ಪೈನ್ ರೋಲ್-ಆನ್ ನಂತಹ ಉತ್ಪನ್ನಗಳು ನನ್ನ ರಕ್ಷಣೆಗೆ ಬಂದಿವೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

























Discussion about this post