ಬೆಂಗಳೂರು (ಕನ್ನಡನಾಡಿ ಸುದ್ದಿಜಾಲ): ಸರ್ಕಾರದ ಸಭೆ ಸಮಾರಂಭಗಳಲ್ಲಿ ಹಾರ-ನೆನಪಿನ ಕಾಣಿಕೆ, ಫಲ-ಪುಷ್ಪಗಳ ಬುಟ್ಟಿ, ಶಾಲು ಮೊದಲಾದವುಗಳನ್ನು ನಿಷೇಧಿಸಲಾಗಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸುವ ಮೂಲಕ ಸ್ಪಷ್ಟ ಪಡಿಸಿದ್ದಾರೆ.
ಈ ನಿಯಮಗಳನ್ನೂ ನಿಷ್ಠುರವಾಗಿ ಪಾಲಿಸುವಂತೆ ಸರ್ಕಾರದ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಅಧಿಕಾರಿಗಳಿಗೆ ವಿಧಿತವಾಗುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಹಿರಿಯ ಪೋಲೀಸ್ ಅಧಿಕಾರಿಗಳ ಸಭೆಗೆ ಆಗಮಿಸಿದ್ದ ಮುಖ್ಯ ಮಂತ್ರಿಗಳು ಹೂಗುಚ್ಛ ನಿರಾಕರಿಸಿದ್ದ ಬೆನ್ನಲ್ಲೇ ಈ ಖಡಕ್ ನಿಯಮಾವಳಿಗಳನ್ನು ಜಾರಿಗೊಳಿಸಲಾಗಿದೆ.
ಕರೋನಾ ಸೋಂಕಿನ ಹರಡುವ ಹಿನ್ನೇಲೆಯಲ್ಲೂ ಸಹ ಈ ಕ್ರಮ ಸ್ವಾಗತಾರ್ಹ.

























Discussion about this post