ಬೆಂಗಳೂರು: ಕೋವಿಡ್ ಮೂರನೆ ಅಲೆಯ ಬಿಕ್ಕಟ್ಟಿನ ವೇಳೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಅವರು ತಮ್ಮ ಕಾರ್ಯವೈಖರಿಯಿಂದಾಗಿ ಬೆಂಬಲಿಲ್ಗರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಜುಲೈ ತಿಂಗಳಿನಲ್ಲಿ ಯಡಿಯೂರಪ್ಪ ಅವರಿಂದ ಅಧಿಕಾರ ವಹಿಸಿಕೊಂಡ ನಂತರ ಬೊಮ್ಮಾಯಿ ಸರ್ಕಾರ ಸಾಕಷ್ಟು ಸವಾಲುಗಳನ್ನು ಎದುರಿಸಿತ್ತು, ಬೆಂಬಲಿಗರೇ ಸಿಡಿದುನಿಲ್ಲುವ ಪ್ರಸಂಗವೂ ಎದುರಾಗುವ ಸಾಧ್ಯತೆ ಕೂಡಾ ಇತ್ತು. ಆದರೆ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಹಾಯಧನ ಹೀಗೆ ಹಲವಾರು ಜನಪರ ಯೋಜನೆಗಳಿಂದ ಅವರು ಜನರ ಮೆಚ್ಚುಗೆ ಸಂಪಾದಿಸಿದ್ದಾರೆ.
ಒಂದು ತಿಂಗಳು ಅಧಿಕಾರ ಪೂರೈಸಿದ ವೇಳೆ ಹಲವಾರು ಶಾಸಕರು ಸಿಎಂ ಕಛೇರಿಗೆ ತೆರಳಿ ಶುಭ ಹಾರೈಕೆ ನೀಡಿದ್ದಾರೆ. ಸಿಎಂ ಇನ್ನುಳಿದ ೧೯ ತಿಂಗಳಲ್ಲಿ ಇನ್ನಷ್ಟು ಸಮರ್ಥವಾಗಿ ಸವಾಲು ಎದುರಿಸಬೇಕಾಗಿದೆ. ಮೊದಲು ಕಾನೂನು ಮತ್ತು ಸಂಸದೀಯ ಖಾತೆ ನಿರ್ವಹಿಸಿದ್ದ ಬೊಮ್ಮಾಯಿ ಅವರಿಗೆ ಸಿಎಂ ಕಾರ್ಯನಿರ್ವಹಣೆ ಒಂದು ಸವಾಲಾಗಿದ್ದು, ಅದನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ.
ಸೆಪ್ಟೆಂಬರ್ ೧೩-೨೪ರವರೆಗೆ ನಡೆಯುವ ವಿಧಾನ ಸಭೆ ಅಧಿವೇಶನದಲ್ಲಿ ಮೇಲ್ಮನೆ, ಕೆಳಮನೆಯಲ್ಲಿ ವಿರೋಧ ಪಕ್ಷಗಳಿಗೆ ಉತ್ತರಿಸಬೇಕಾಗಿದೆ. ಆನಂದ್ ಸಿಂಗ್ ಎಂಟಿಬಿಯವರ ಅತೃಪ್ತಿ ಇನ್ನೂ ಹೊಗೆಯಾಡುತ್ತಲೇ ಇದೆ, ಮಾಜಿ ಸಚಿವ ಜಾರಕಿಹೊಳಿ ಸೈಲೆಂಟ್ ಆಗಿದ್ದಾರೆ ಆದರೆ ಭಿನ್ನಮತ ಒಳಗೊಳಗೆ ಇದೆ ಎನ್ನಲಾಗುತ್ತಿದೆ.
ನಾಲ್ಕು ಸಚಿವರಿಗೆ ಅವಕಾಶ ನೀಡಬೇಕಾಗಿದ್ದು, ೨೦ಕ್ಕೂ ಅಧಿಕ ಅಕಾಂಕ್ಷಿಗಳಿದ್ದಾರೆ. ಯಡಿಯೂರಪ್ಪನವರ ಪುತ್ರ ಬಿವೈ ವಿಜಯೇಂದ್ರ ಅವರಿಗೆ ಅವಕಾಶ ಬಯಸಿದರೂ, ಹೈಕಮಾಂಡ್ ಸೂಚನೆಯಂತೆ ಸಿಎಂ ನಡೆಯಬೇಕಿದೆ. ಕಳಸಾ-ಬಂಡೂರಿ, ಎತ್ತಿನಹೊಳೆ, ಮೇಕೆದಾಟು, ಕೃಷ್ಣ ಮೇಲ್ದಂಡೆ ಯೋಜನೆಗಳು ಸಹ ಇನ್ನೂ ಇತ್ಯರ್ಥವಾಗಿಲ್ಲ. ೨೦೦೮-೨೦೧೩ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೊಮ್ಮಾಯಿ ಐದು ವರ್ಷಗಳ ಕಾಲ ಜಲಸಂಪನ್ಮೂಲ ಸಚಿವರಾಗಿದ್ದರು, ಹೀಗಾಗಿ ಜಲವಿವಾದಗಳನ್ನು ಸಮರ್ಥವಾಗಿ ಬಗೆಹರಿಸುವರು ಎನ್ನುವ ಅಶಯ ಎಲ್ಲರಲ್ಲಿದೆ.
ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸೇರಿದಂತೆ, ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಪ್ರಶ್ನೆ ಹುಟ್ಟುತ್ತಿವೆ, ಸಂಪೂರ್ಣವಾಗಿ ಹೈಕಮಾಂಡ್ ನ ನಿಯಂತ್ರಣದಲ್ಲಿದ್ದಾರೆಯೇ ಸಿಎಂ? ಎನ್ನುವ ಅನುಮಾನಗಳು ಸಹ ಇಲ್ಲದಿಲ್ಲ.
ಒಳಗಿನ ಭಿನ್ನಾಭಿಪ್ರಾಯಗಳು ಏನೇ ಇರಲಿ, ಸಿಎಂ ತಮ್ಮ ಕಾರ್ಯವೈಖರಿಯಿಂದ ಎಲ್ಲವನ್ನು ಸಮರ್ಪಕವಾಗಿ ನಿಭಾಯಿಸಿಕೊಂಡು ಹೋಗುವುದರಲ್ಲಿ ಯಶಸ್ವಿಯಗ್ತಾರೆ ಎಂಬ ಅಶಯ ಕನ್ನಡ ನಾಡಿನ ಜನತೆಯಲ್ಲಿ ಇದೆ.

























Discussion about this post