ಬೆಳಗಾವಿ: ರಾಜ್ಯದ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಕಡತಗಳ ವಿಲೇವಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಆದೇಶ ಹೊರಡಿಸಿದ್ದಾರೆ.
ಶೀಘ್ರವೇ ಕಡತ ವಿಲೇವಾರಿಗೆ ಕ್ರಮ ಕೈಗೊಂಡಿದ್ದು, ತಾವು ಅಧಿಕಾರ ವಹಿಸಿಕೊಂಡ ದಿನವೂ ಸಹ ಕಡತ ವಿಲೇವಾರಿ ಚುರುಕುಗೊಳಿಸಲು ಸೂಚಿಸಿದ್ದರು, ಅದರ ಜೊತೆಗೆ ಈಗ ೩ ಅಂಶಗಳ ಕಠಿಣ ನಿಯಮಗಳ ಸುತ್ತೋಲೆ ಹೊರಡಿಸಿರುತ್ತಾರೆ.
ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯಲ್ಲಿ ಬಾಕಿ ಇರುವ ಕಡತಗಳನ್ನು ಸಂಪೂರ್ಣ ನೂರಕ್ಕೆ ನೂರರಷ್ಟು ವಿಲೇವಾರಿ ಮಾಡಬೇಕಾಗಿದೆ. ೬ ತಿಂಗಳಿಗಿಂತ ಹೆಚ್ಚಿನ ಅವಧಿಯ ಕಡತಗಳನ್ನು ಶೇ. ೫೦ಕ್ಕಿಂತ ಹೆಚ್ಚು ವಿಲೇವಾರಿಗೆ ಆದೇಶಿಸಿದ್ದಾರೆ.
೩೦ ದಿವಸಗಳಿಗಿಂತ ಹೆಚ್ಚಿನ ಅವಧಿಯ ಕಡತಗಳ ಕುರಿತು ಕೂಡಲೇ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಾಗಿ ಇಲಾಖೆ ಈ ಸುತ್ತೋಲೆ ಹೊರಡಿಸಿದ್ದು ಮುಖ್ಯ ಮಂತ್ರಿಗಳು ಶೀಘ್ರವೇ ಕಡತ ವಿಲೇವಾರಿ ಪರಿಶೀಲನೆ ಮಾಡಲಿದ್ದಾರೆ ಹೀಗಾಗಿ ಒಂದು ತಿಂಗಳ ಒಳಗೆ ಕಡತ ವಿಲೇವಾರಿ ಮಾಡಬೇಕಾಗಿದೆ ಎಂಬ ಕಠಿಣ ಸೂಚನೆ ಇದಾಗಿದೆ.

























Discussion about this post