ಬೆಂಗಳೂರು: ರಾಜ್ಯದ ಬುಡಕಟ್ಟು ಜನಾಂಗ ಕೊರಗ ಸಮುದಾಯದವರು ಇಂದಿಗೂ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮುದಾಯದ ಮುಖಂಡರೊಡನೆ ಶಾಸಕ ಕೆ. ರಘುಪತಿ ಭಟ್ ಅವರು ಮಂಗಳವಾರ ಪರಿಶಿಷ್ಠ ಪಂಗಡಗಳ ಕಲ್ಯಾಣ ಸಚಿವರಾದ ಶ್ರೀರಾಮುಲು ಜೊತೆಗೆ ಸಭೆ ನಡೆಸಿದರು.
ಕೊರಗ ಸಮುದಾಯದವರು ವಾಸ್ತವ್ಯದ ಮನೆ ನಿರ್ಮಿಸುವಲ್ಲಿ ಇರುವ ತಾಂತ್ರಿಕ ಸಮಸ್ಯೆಗಳು, ಸಮುದಾಯದ ಸಮಗ್ರ ಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ನೆರವು, ಶೈಕ್ಷಣಿಕ ವ್ಯವಸ್ಥೆ, ಉನ್ನತ ಶಿಕ್ಷಣ ಮೀಸಲಾತಿ ಆದ್ಯತೆ, ಸರ್ಕಾರಿ ಉದ್ಯೋಗದಲ್ಲಿ ಆದ್ಯತೆ ಮೊದಲಾದ ವಿಚಾರಗಳಿಗೆ ಸಂಬಂಧಿಸಿದಂತೆ ಜನರಿಗೆ ಸರ್ಕಾರ ಹಾಕಿಕೊಂಡ ಯೋಜನೆಗಳು ತಲುಪುವ ಬಗ್ಗೆ ಸಚಿವರ ನಿವಾಸದಲ್ಲಿ ಮಹತ್ವದ ಚಿಂತನೆ ನಡೆಸಲಾಯಿತು.
ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಕೊರಗರ ಜನವಸತಿ ಕಾಲನಿಯಲ್ಲಿ ವಾಸ್ತವ್ಯ ಹೂಡುವುದಾಗಿ ಸಚಿವ ಶ್ರೀರಾಮುಲು ಆಶ್ವಾಸನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀರಾಮುಲು ನಿವಾಸದಲ್ಲಿ ಪರಿಶಿಷ್ಟ ಪಂಗಡಗಳ ಇಲಾಖೆ ನಿರ್ದೇಶಕ ಕಾಂತರಾಜು, ಕೊರಗ ಸಮುದಾಯದ ಪ್ರಮುಖರಾದ ಬೊಗ್ರ ಕೊಕ್ಕರ್ಣೆ, ಪುತ್ರನ್ ಹೆಬ್ರಿ, ಕುಮಾರ ಕೆಂಜೂರು, ದಿವಾಕರ ಕಳತ್ತೂರು, ಸುಶೀಲಾ, ಶೇಖರ ಕೆಂಜೂರು, ದೀಪ ಜಪ್ತಿ, ಸುರೇಂಡ್ರ ಕೆಳತ್ತೂರು, ಯುಹಂದ್ರ ಕಳತ್ತೂರು ಮೊದಲಾದಾರು ಉಪಸ್ಥಿತರಿದ್ದರು.

























Discussion about this post