ನವದೆಹಲಿ: ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರದ ರಾಜದಾನಿ ದೆಹಲಿಯಲ್ಲಿ ಕೇಂದ್ರ ಸಚಿವರೊಂದಿಗೆ ಸಭೆ ನಡೆಸಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಕೇಂದ್ರ ಸಚಿವರೊಂದಿಗೆ ಭೇಟಿ ನಡೆಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಕೃಷಿ ಸಚಿವರೊಂದಿಗೆ ಕರ್ನಾಟಕದಲ್ಲಿ ಕೃಷಿ ಮತ್ತು ಕೃಷಿ ಅಭಿವೃದ್ಧಿ ಕುರಿತು ಚರ್ಚೆ ನಡೆಸಿರುವುದಾಗಿ ತಿಳಿಸಿದರು.
ಕರ್ನಾಟಕದಲ್ಲಿ ೨೦೨೧-೨೨ರ ಮುಂಗಾರು ಹಂಗಾಮಿಗೆ ಬೆಂಬಲ ಬೆಲೆ ಯೋಜನೆಯಡಿ ಉದ್ದು ಮತ್ತು ಹೆಸರು ಕಾಳು ಖರೀದಿಸಲು ಕೇಂದ್ರದ ಅನುಮತಿ ದೊರೆತಿರುವುದಾಗಿಯೂ, ಆದೇಶವನ್ನು ಸದ್ಯದಲ್ಲೇ ಹೊರಡಿಸುವುದಾಗಿಯೂ ಹೇಳಿದ್ದಾರೆ.
ರೈತರ ಆದಾಯ ದ್ವಿಗುಣಗೊಳಿಸಲು ಕ್ರಮ, ಹೊಸ ಕೃಷಿ ನೀತಿಯಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಬಗ್ಗೆ ಸಹ ಚರ್ಚೆ ನಡೆಸಲಾಗಿದೆ ಎಂದರು. ರೈತರ ಮಕ್ಕಳಿಗೆ ವಿದ್ಯಾನಿಧಿ-ವಿದ್ಯಾರ್ಥಿ ವೇತನ ಯೋಜನೆಗಳ ಜಾರಿಗೆ ತರಲು, ಮುಂದಿನ ತಿಂಗಳು ೫ನೇ ತಾರೀಖಿನಂದು ಕೇಂದ್ರ ಕೃಷಿ ಸಚಿವರು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಸರ್ವೋಚ್ಛ ನ್ಯಾಯಾಲಯದಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಮೂರು ಹಂತದ ಬಗ್ಗೆ ಚರ್ಚಿಸಲಾಯಿತು. ಬ್ರಿಜೇಶ್ ಕುಮಾರ್ ಮಿಶ್ರಾ ಟ್ರಿಬ್ಯೂನಲ್ ಅಧಿಸೂಚನೆ ಹೊರಡಿಸಲು ಕರ್ನಾಟಕ ಹಾಗೂ ಮಹಾರಾಷ್ಟ್ರ ಒಟ್ಟಾಗಿ ಬೇಡಿಕೆ ಇಟ್ಟಿದೆ ಎಂಬ ವಿಷಯ ಬಹಿರಂಗ ಪಡಿಸಿದರು.
ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಜಲವಿವಾದ ಪ್ರಕರಣಕ್ಕೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಇತ್ಯರ್ಥಗೊಳಿಸಲು ಮನವಿ ಸಲ್ಲಿಸಿರುವುದಾಗಿ ಅವರು ಹೇಳಿಕೆ ನೀಡಿದರು. ಅಂತರ್ ರಾಜ್ಯ ಜಲವಿವಾದ ಕಾಯ್ದೆಯ ಪ್ರಕರ ರಾಜ್ಯದ ನಿಲುವು ಸಕಾರಾತ್ಮಕವಾಗಿದ್ದು ರಾಜ್ಯದ ಅಟಾರ್ನಿ ಜನರಲ್ ಸಲ್ಹೆ ಮೇರೆಗೆ ಮುಂದಿನ ಹೆಜ್ಜೆ ಇರಿಸಲಿದೆ ಎಂದಿದ್ದಾರೆ.
ಅಂತರಾಜ್ಯ ಕಲಹ ಬಗೆಹರಿಸುವ ನಿಟ್ಟಿನಲ್ಲಿ ಇಂದು ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಸುದೀರ್ಘ ಚರ್ಚೆ ಮಾಡಲಾಗಿದೆ. ತಮಿಳುನಾಡು ಸರ್ಕಾರದ ಕಾವೇರಿ-ಗುಂಡಾರ್ ನದಿ ಜೋಡಣೆ ಯೋಜನೆಗೆ ಅನುಮತಿ ಇಲ್ಲದಿರುವುದರಿಂದ ಅನುಷ್ಠಾನ ಕಷ್ಟವಾಗುವುದು. ಮೇಕೆದಾಟು -ಮಲಪ್ರಭ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ, ಕಾವೇರಿ -ಎತ್ತಿನಹೊಳೆಯ ನಿರ್ಧಿಷ್ಟ ಪ್ರಸ್ತಾವನೆಯೊಂದಿಗೆ ಪುನಃ ಕೇಂದ್ರ ಸಚಿವರನ್ನು ಭೇಟಿ ಮಾಡಲಾಗುವುದು ಎಂದವರು ಹೇಳಿದ್ದಾರೆ.
ರಾಜ್ಯ ಹಕ್ಕನ್ನು ಉಳಿಸಿಕೊಳ್ಳುವಂತೆ ಕಾನೂನು ತಂಡ ರಚಿಸಿ ಮಹದಾಯಿ-ಮೇಕೆದಾಟು ಯೋಜನೆಯಲ್ಲಿ ಹೋರಾಟ ಮಾಡಲಾಗುವುದು, ಇದೇ ವೇಳೆ ರಾಜ್ಯ ಸರ್ಕಾರದ ನಿಲುವುದು ನ್ಯಾಯಸಮ್ಮತವಾಗಿದೆ ಎಂಬುದರ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದವರು ಸುದ್ಧಿಗಾರರಿಗೆ ತಿಳಿಸಿದ್ದಾರೆ.
ಸರ್ವೋಚ್ಛ ನ್ಯಾಯಾಲಯದ ಸೂಚನೆಯಂತೆ ನೀರು ಹಂಚಿಕೆ ಮಾಡಿದ್ದೆವೆ, ಕೇಂದ್ರ ಜಲ ಪ್ರಾಧಿಕಾರ ಸಭೆಯಲ್ಲಿ ಚರ್ಚಿಸಲಾಗುವುದು ಎಂದವರು ಹೇಳಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಬೇಕಾಗಿದೆ, ಉಳಿದ ಎಲ್ಲಾ ಅನುಮೊದನೆ ಲಭ್ಯವಾಗಿದೆ ಎಂದಿದ್ದಾರೆ.
ಇದೇ ವೇಳೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಹ ಉಪಸ್ಥಿತರಿದ್ದರು. “ಎತ್ತಿನ ಹೊಳೆ ಯೋಜನೆ ಬಗ್ಗೆ ಚರ್ಚೆ ನಡೆಸಿದ್ದು, ಆ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದ್ದು, ನಿರ್ಧಿಷ್ಠ ಪ್ರಸ್ತಾವನೆಯೊಂದಿಗೆ ಮತ್ತೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುತ್ತೇನೆ. ಜಲ ಜೀವನ್ ಮಿಷನ್ ಯೋಜನೆಗೆ ಅಗತ್ಯವಿರುವ ಅನುದಾನ ಪ್ರಸ್ತಾವನೆ ಸಲ್ಲಿಸಲಾಗಿದೆ”- ಸಿಎಂ ಬೊಮ್ಮಾಯಿ

























Discussion about this post