ಉಡುಪಿ: ನಾಡಗೀತೆಯನ್ನು ಎಷ್ಟು ನಿಮಿಷ ಹಾಡುವುದು? ಸಂಗೀತ ಹೇಗಿರಬೇಕೆಂದು ಚರ್ಚೆಗಳು ನಡೆದಿದ್ದು, ಸದ್ಯದಲ್ಲೇ ಸೂಚ್ಯ ಅಂಶಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ವಿವಿಧ ಜಯಂತಿಗಳನ್ನು ಜನರಿಗೆ ತಲುಪಿಸುವ ರೀತಿ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳೊಡನೆ ಅ.೨೭ರಂದು ನಡೆಸಲಾಗುವುದು ಎಂದರು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿ ರಾಜ್ಯದಲ್ಲಿ ರಾಷ್ಟ್ರಭಕ್ತಿ ವಾತಾವರಣ ನಿರ್ಮಿಸಲು ಯೋಜನೆ ರೂಪಿಸಲಾಗುವುದು, ಅದಿವೇಶನಕ್ಕೆ ಮೊದಲು ಎರಡು ಅಂಶಗಳು ನಿರ್ಧಾರವಾಗುವವು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸ್ವಾರ್ಟ್ ಮೀಟರ್, ಪ್ರೀ ಪೇಯ್ಡ್ ಮೀಟರ್ ಕುರಿತು ಸಾಧಕ ಬಾಧಕಗಳ ಚರ್ಚೆ ನಡೆಸಿ ಯೋಜನೆ ರೂಪಿಸಲಾಗುವುದು ಎಂದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಶಾಲೆ ಪ್ರಾರಂಭ ಮಾಡಲು ಯೋಜಿಸಿರುವುದಾಗಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

























Discussion about this post