ಬೆಂಗಳೂರು: ನಿಮ್ಹಾನ್ಸ್ ಆಸ್ಪತ್ರೆಯ ಅಧಿಕಾರಿಗಳು ನಮ್ಮನ್ನು ಕಾನೂನುಬಾಹಿರವಾಗಿ ಸೇವೆಯಿಂದ ವಜಾ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಮುದಾಯಕ್ಕೆ ಸೇರಿದ 15 ಮಹಿಳೆಯರು ಸೇರಿದಂತೆ ಒಟ್ಟು 19 ಮಂದಿ ಬೆಂಗಳೂರಿನಲ್ಲಿ ಜುಲೈ 9 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.
ತಮ್ಮನ್ನು ಮತ್ತೆ ಸೇವೆಗೆ ತೆಗೆದುಕೊಳ್ಳುವಂತೆ ಆಡಳಿತ ಮಂಡಳಿಯನ್ನು ಮಹಿಳೆಯರು ಒತ್ತಾಯಿಸಿದ್ದಾರೆ. ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ (AICCTU) (ಎಐಸಿಸಿಟಿಯು) ಗೆ ಸಂಯೋಜಿತವಾಗಿರುವ ನಿಮ್ಹಾನ್ಸ್ ಪ್ರಗತಿಪರ ವರ್ಕರ್ಸ್ ಯೂನಿಯನ್ (ಎನ್ಪಿಡಬ್ಲ್ಯುಯು) ಅಡಿಯಲ್ಲಿ ಪ್ರತಿಭಟನೆ ನಡೆದಿದೆ.
ಕೊರೊನಾ ನೈಟ್ ಕರ್ಫ್ಯೂ ಇದ್ದಂತಹ (ಎರಡು ತಿಂಗಳ ಹಿಂದೆ) ಸಮಯಲ್ಲಿ ನೌಕರರಿಗೆ ರಾತ್ರಿ 9:30 ವರೆಗೆ ಕೆಲಸ ನಿರ್ವಹಿಸುವಂತೆ ನಿಮ್ಹಾನ್ಸ್ ಆಡಳಿತ ಮಂಡಳಿಯು ನಿರ್ದೇಶಿಸಿತ್ತು. ಆದರೆ ಕಾರ್ಮಿಕರು ರಾತ್ರಿ ಹೊತ್ತು ಬಸ್ಸುಗಳು ಇಲ್ಲದಿರುವ ಕಾರಣ, ತಮಗೆ ವಾಹನಗಳನ್ನು ವ್ಯವಸ್ಥೆ ಮಾಡಿಕೊಡಿ ಎಂದು ಕೋರಿದ್ದರು. ಇಷ್ಟಕ್ಕೆ ಆಡಳಿತ ಮಂಡಳಿ ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಿದೆ ಎಂದು ಎನ್ಪಿಡಬ್ಲ್ಯು (NPW)ಯು ಆರೋಪಿಸಿದೆ.
ಪ್ರತಿಭಟನಾ ಸ್ಥಳಕ್ಕೆ ಸಾಮಾಜಿಕ ಹೋರಾಟಗಾರರಾಗಿರುವ ವಿನಯ್ ಶ್ರೀನಿವಾಸ್ ಅವರು ಭೇಟಿ ನೀಡಿ ಕಾರ್ಮಿಕರಿಗೆ ಬೆಂಬಲ ನೀಡಿದ್ದಾರೆ. ಹೊರಗುತ್ತಿಗೆ ಏಜೆನ್ಸಿಯಿಂದ ಬಂದವರಾಗಿದ್ದರೂ, ನಿಮ್ಹಾನ್ಸ್ ಅಧಿಕಾರಿಗಳ ಸೂಚನೆ ಮೇರೆಗೆ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ನಮ್ಮನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳುವವರೆಗೂ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
“ಎಲ್ಲಾ ಕಾರ್ಮಿಕರು ಹೊರಗುತ್ತಿಗೆ ಏಜೆನ್ಸಿಗೆ ಸೇರಿದವರು. ಯಾರೂ ನಿಮ್ಹಾನ್ಸ್ನಿಂದ ನೇರವಾಗಿ ಕೆಲಸ ಮಾಡುತ್ತಿಲ್ಲ. ಈ ಕಾರ್ಮಿಕರ ಮೇಲೆ ನಮಗೆ ಯಾವುದೇ ನಿಯಂತ್ರಣವಿಲ್ಲ. ಅವರ ಕೆಲಸದ ಸ್ವರೂಪವನ್ನು ತೀರ್ಮಾನಿಸಲು ಏಜೆನ್ಸಿಗೆ ಅಧಿಕಾರವಿದೆ” ಎಂದು ಅವರು ದಿ ಹಿಂದೂಗೆ ನಿಮ್ಹಾನ್ಸ್ ರಿಜಿಸ್ಟ್ರಾರ್ ಬಿ.ಎಸ್. ಶಂಕರನಾರಾಯಣರಾವ್ ಪ್ರತಿಕ್ರಿಯೆ ನೀಡಿದ್ದಾರೆ.

























Discussion about this post