ದಾವಣಗೆರೆ: ಗ್ರಾಮಕ್ಕೆ ಇದ್ದ ಕೆರೆ ಬರದಿಂದ ಒಣಗಿ ಹೋಗಿ ಕೃಷಿಗೆ, ಕುಡಿಯುವ ನೀರಿಗೆ ಬರಗಾಲ ಬಂದಿದೆ ಎಂದು ಜನಪ್ರತಿನಿಧಿಗಳಿಗೆ ಎಷ್ಟೇ ಹೇಳಿದರೂ ಕ್ಯಾರೇ ಅನ್ನದಿದ್ದಾಗ, ಊರಿನ ಜನರೇ ಸೇರಿ ಜಲದ ಭರ್ತಿ ಮಾಡಲು ನೀರು ತಂದರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರ ಹಳ್ಳಿಯ ನಾಡಿಗರ ಎಂಬ ಐತಿಹಾಸಿಕ ಕೆರೆಗೆ ಇಂದು ಗ್ರಾಮಸ್ಥರೇ ಸೇರಿ ನೀರು ಹರಿಸಿದ್ದಾರೆ. ಊರಿನ ಆಕರ್ಷಣೀಯ ಕೇಂದ್ರವಾಗಿರುವ ಈ ಕೆರೆಯಿಂದ ಊರಿಗೆ ಕಳೆ ಬಂದಿದೆ. ಗ್ರಾಮಸ್ಥರೇ ಹಣ ಹೊಂದಿಸಿ ಈ ಕಾರ್ಯ ಮಾಡಿದ್ದಾರೆ ಜೊತೆಗೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ಕೂಡಾ ಹಣಕಾಸಿಗೆ ಸಾಥ್ ಕೊಟ್ಟಿದ್ದರು.
೬ ಲಕ್ಷಕ್ಕೂ ಹೆಚ್ಚು ಹಣವನ್ನು ಬಸವರಾಜು ವಿ ಶಿವಗಂಗಾ ಹೊಂದಿಸಿದ್ದು, ಉಳಿದ ಹಣ ಗ್ರಾಮಸ್ಥರು ಹೊಂದಿಸಿ, ಸುಮಾರು ೨೫ ಲಕ್ಷ ವೆಚ್ಚದಲ್ಲಿ ಶಾಂತಿ ಸಾಗರದಿಂದ ಪೈಪ್ ಲೈನ್ ಮೂಲಕ ಕೆರೆಗೆ ನೀರು ತುಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಮಾರ್ಚ್ ನಲ್ಲಿ ಕೆರೆಗೆ ನೀರು ಬಂದಿದ್ದು, ಇದೀಗ ಕೆರೆ ಭರ್ತಿಯಾಗಿದೆ. ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ಕಾಯದೇ ತಮ್ಮ ಊರಿನ ಕಷ್ಟಕ್ಕೆ ಗ್ರಾಮಸ್ಥರೇ ಹೆಗಲು ಕೊಟ್ಟು ಜಲಲಧಾರೆ ಹರಿಸಿದ್ದಾರೆ.

























Discussion about this post