ಮೈಸೂರು: ನಂಜನಗೂಡಿನಲ್ಲಿ ತೆರವು ಮಾಡಿದ್ದ ದೇಗುಲ ವಿವಾದ ಕುರಿತಂತೆ ಬಿಜೆಪಿ, ಬಿಜೆಪಿ ಪರ ಸಂಘಟನೆಗಳು ಕೇಸರಿ ಬಾವುಟಗಳನ್ನು ಹಿಡಿದು ಮೈಸೂರಿನಲ್ಲಿ ತಂಡ ತಂಡವಾಗಿ ಕೋವಿಡ್ ರೂಲ್ಸ್ ಗಾಳಿಗೆ ತೂರಿ ಇಂದು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.
ಪೊಲೀಸರೊಂದಿಗೆ ತಳ್ಳಾಟ, ನೂಕಾಟ ನಡೆಯುತ್ತ ಪ್ರತಿಭಟನೆ ನಡೆಯಿತು. ಇದೇ ಪ್ರತಿಭಟನೆಯಲ್ಲಿ ವಿಹೆಚ್ ಪಿ, ಹಿಂದೂ ಜಾಗರಣ ವೇದಿಕೆ ಮತ್ತು ಇತರೆ ಸಂಘಟನೆಗಳು ಮೈಸೂರಿನ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದರು.
ಕೇಸರಿ ಧರಿಸಿದ್ದ ಪ್ರತಿಭಟನೆಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಡೌನ್ ಡೌನ್ ಬಿಜೆಪಿ ಎಂದು ಹೇಳುತ್ತಿದ್ದರು.
ಕೋಟೆ ಆಂಜನೇಯ ಸ್ವಾಮಿ ದೇಗುಲದ ಉತ್ತರ ಗೇಟ್ ಬಳಿ ಪ್ರತಿಭಟನೆ ಶುರು ಮಾಡಿದ್ದರು. ಬಿಜೆಪಿ ಎಮ್ ಎಲ್ ಎ ಆಗಿರುವ ಎಸ್. ಎ ರಾಮದಾಸ್ ಅವರನ್ನು ಸೇರಿದಂತೆ ದೇಗುಲ ಕೆಡವಿದ ಪ್ರಸಂಗಕ್ಕೆ ಸಾಥ್ ನೀಡಿದವರ ವಿರುದ್ಧ ಘೋಷಣೆ ಕೂಗಲಾಯಿತು. ಅಲ್ಲಿಂದ ವಿವಿಧ ರಸ್ತೆಗಳಲ್ಲಿ ನೂಕಾಟ ತಳ್ಳಾಟ ನಡೆದು ಸಾಗಿತ್ತು.
ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕೋಟೆ ಆಂಜನೇಯ ಸ್ವಾಮಿ ದೇಗುಲದ ಬಾಗಿಲನ್ನು ಮುಚ್ಚಿದರು. ನಂತರ ಜನಜಂಗುಳಿ ನಿಭಾಯಿಸುವಲ್ಲಿ ಹರಸಾಹಸ ಪಟ್ಟರು.

























Discussion about this post